ಅಕ್ರಮ ಗೋವು ಸಾಗಾಟವನ್ನು ನಿಲ್ಲಿಸಲು ಸಂಸದ ಅನಂತಕುಮಾರ ಹೆಗಡೆ ಆಗ್ರಹ

ಆದ್ಯೋತ್ ಸುದ್ದಿನಿಧಿ:
ಅಕ್ರಮ ಗೋವು ಸಾಗಾಟವನ್ನು ತಡೆಯಲು ಆಗ್ರಹಿಸಿ ಕೆನರಾ ಸಂಸದ ಅನಂತಕುಮಾರ ಹೆಗಡೆ ಗೃಹಸಚೀವ ಬಸವರಾಜ ಬೊಮ್ಮಾಯಿಯವರಿಗೆ ಪತ್ರ ಬರೆದಿದ್ದಾರೆ.

ಕಳೆದ ಹಲವಾರು ವರ್ಷದಿಂದ ರಾಜ್ಯದಲ್ಲಿ ಅಕ್ರಮ ಗೋವು ಸಾಗಾಟ ದಂದೆಯು ಅವ್ಯಾಹತವಾಗಿ ನಡೆಯುತ್ತಿದೆ.
ಈ ಅಕ್ರಮ ಗೋವು ಸಾಗಾಟದ ದಂದೆ ನಡೆಸುವವರು ರೈತರ ಹಾಗೂ ರಸ್ತೆ ಬದಿಯಲ್ಲಿ ಮಲಗಿರುವ ದನ ಮತ್ತು ಕರುಗಳನ್ನು ಕದ್ದು ಸಾಗಿಸುತ್ತಾರೆ ಇದೊಂದು ಮಾಪಿಯಾ ತರಹದ ಜಾಲವಾಗಿದ್ದು ಕರ್ತವ್ಯ ನಿರತ ಪೊಲೀಸ್ ರ ಮೇಲೆ ಹಲ್ಲೆ ನಡೆಸಿರುವ ಉದಾಹರಣೆಯೂ ಇದೆ.
ಈ ದಂದೆಯಿಂದ ಬಂದ ಹಣವನ್ನು ಕಾನೂನು ಬಾಹಿರ ಚಟುವಟಿಕೆಗೆ ಉಪಯೋಗಿಸುತ್ತಿರುವುದು ಬಹಿರಂಗ ಸತ್ಯ
ಇದರಿಂದಾಗಿ ಕೋಮು ಗಲಭೆಯಂತಹ ಸಾಮಾಜಿಕ ಸ್ವಾಸ್ಥ್ಯವನ್ನು ಕದಡುವಂತ ಘಟನೆಗಳು ನಡೆಯುತ್ತವೆ
ಕಾರಣ ಪೊಲೀಸ್ ಇಲಾಖೆಯವರು ಇಂತಹ ಅಕ್ರಮ ಗೋವು ಸಾಗಾಟಗಾರರನ್ನು ಬಂಧಿಸಿ ಗೂಂಡಾ ಕಾಯ್ದೆಯಂತಹ ಕಠೀಣ ಕ್ರಮವನ್ನು ತೆಗೆದುಕೊಳ್ಳಬೇಕು ಸಮಾಜದ ಸ್ವಾಸ್ಥ್ಯವನ್ನು ಉಳಿಸಬೇಕು ಎಂದು ಅನಂತಕುಮಾರ ಹೆಗಡೆ ಪತ್ರದಲ್ಲಿ ಆಗ್ರಹಿಸಿದ್ದಾರೆ.

About the author

Adyot

Leave a Comment