ಆದ್ಯೋತ್ ಸುದ್ದಿನಿಧಿ: ಕೊವಿಡ್19 ಅಬ್ಬರಕ್ಕೆ ನಲುಗುತ್ತಿರುವ ಪಶ್ಚಿಮ ಬಂಗಾಳಕ್ಕೆ ಅಂಫಾನ ಚಂಡಮಾರುತ ಬಹುದೊಡ್ಡ ಹೊಡೆತ ಕೊಡುತ್ತಿದ್ದು, ಕೊವಿಡ್19 ಗಿಂತ ಅಂಫಾನವೇ ಹೆಚ್ಚು ಭೀಕರವಾಗಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಉದ್ಘರಿಸಿದ್ದಾರೆ.
ಪಶ್ಚಿಮ ಬಂಗಾಳದ 24ಪರಗಣ ಜಿಲ್ಲೆ,ಪೂರ್ವಮಿಡ್ಡಾಪುರಜಿಲ್ಲೆ
ಒಡಿಶಾದ ಬಾಲಾಸಾರ ಜಿಲ್ಲೆಗಳು ಅಂಫಾನ ಚಂಡಮಾರುತದಿಂದ ಅಕ್ಷರಶಃ ನಲುಗಿದೆ.
72 ಜನರು ಸಾವನ್ನಪ್ಪಿದ್ದು ಸುಮಾರು 1 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ. ರಸ್ತೆಗಳು ಮಳೆಯಿಂದಾಗಿ ನದಿಯಂತಾದರೆ, ವಿಮಾನ ನಿಲ್ದಾಣಗಳು ಸರೋವರದಂತಾಗಿದೆ. ನೂರಾರು ಟನ್ ಭಾರದ ಟ್ರಕ್ ಗಳು ಗಾಳಿಯ ಹೊಡೆತಕ್ಕೆ ಮಗುಚಿ ಬಿದ್ದಿದೆ. 160-190 ಕಿ.ಮಿ ವೇಗದಲ್ಲಿ ಬೀಸಿದ ಗಾಳಿಗೆ ಸಾವಿರಾರು ಮರಗಳು ಧರೆಗುರುಳಿದೆ. ಅಷ್ಟೆ ಪ್ರಮಾಣದಲ್ಲಿ ವಿದ್ಯುತ್ ಕಂಬಗಳು ಮುರಿದಿದ್ದು ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳು ಕತ್ತಲಲ್ಲಿ ಮುಳುಗಿವೆ.
ಪಶ್ಚಿಮ ಬಂಗಾಳದಲ್ಲಿ 5 ಲಕ್ಷ ಜನರನ್ನು ಒಡಿಶಾದಲ್ಲಿ 158064 ಜನರನ್ನು ಸ್ಥಳಾಂತರಿಸಲಾಗಿದೆ. ಭೀಕರ ಮಳೆಯ ನಡುವೆಯೇ ಎನ್.ಡಿ.ಆರ್.ಎಪ್.ತಂಡ ಮರಗಳ ತೆರವು ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ. ಒಂದೆರಡು ದಿನದಲ್ಲಿ ವಿದ್ಯುತ್ ವ್ಯವಸ್ಥೆ ಸರಿಪಡಿಸಲಾಗುವುದು ಎಂದು ಪಶ್ಚಿಮ ಬಂಗಾಳದ ಅಧಿಕಾರಿಗಳು ಹೇಳಿದ್ದಾರೆ.
ಅಲ್ಲಲ್ಲಿ ಭೂ ಕುಸಿತಗಳಾಗಿದೆ. ಮನೆಗಳು ನೆಲಕ್ಕುರಳಿವೆ ಬದುಕು ಕಳೆದುಕೊಂಡ ಜನರು ನಿರಾಶ್ರಿತ ಕೇಂದ್ರದ ಆಶ್ರಯ ಪಡೆದಿದ್ದಾರೆ ಆದರೆ ಅಲ್ಲಿ ಕೊವಿಡ್ ಭಯ. ಮಕ್ಕಳಿಗೆ ಅಪಾಯ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಯುನಿಸೆಫ್ ಕಳವಳ ವ್ಯಕ್ತಪಡಿಸುತ್ತಿದೆ. ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದು ಹಾನಿಗೊಳಗಾದ ಸ್ಥಳಗಳನ್ನು ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.