ನಾಡ ಬಾಂಬ್ ಸಿಡಿದು ಎತ್ತಿನ ಬಾಯಿಗೆ ತೀವ್ರ ಗಾಯ

ಆದ್ಯೋತ್ ಸುದ್ದಿನಿಧಿ:
ಮೇವು ತಿನ್ನಲು ಹೋದ ಎತ್ತು ದುಷ್ಕರ್ಮಿಗಳು ಇಟ್ಟ ನಾಡಬಾಂಬ್ ಕಚ್ಚಿ ತೀವ್ರ ಗಾಯಗೊಂಡ ಘಟನೆ ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಸನವಳ್ಳಿ ಗ್ರಾಮದಲ್ಲಿ ಜರುಗಿದೆ.
ಸನವಳ್ಳಿ ಪ್ಲಾಟನ ಅಪ್ಪು ತಂದೆ ನಾರಾಯಣ ನಾಯರ್ ಎಂಬುವವರಿಗೆ ಸೇರಿದ ಎತ್ತು ಇದಾಗಿದ್ದು ಸನವಳ್ಳಿ ಡ್ಯಾಂ ಬಳಿ ಮೇಯಲು ಹೋದಾಗ ಯಾರೋ ದುಷ್ಕರ್ಮಿಗಳು ಕಾಡುಪ್ರಾಣಿಗಳನ್ನು ಬೇಟೆಯಾಡಲು ಇಟ್ಟ ನಾಡ ಬಾಂಬ್ ಅನ್ನು ಕಚ್ಚಿದ್ದು ನಾಡ ಬಾಂಬ್ ಸಿಡಿದು ಎತ್ತಿನ ಬಾಯಿ ಗಾಯವಾಗಿದ್ದು ಮೇವು ತಿನ್ನಲು ಹಾಗೂ ನೀರು ಕುಡಿಯಲು ಆಗದ ಸ್ಥಿತಿ ಉಂಟಾಗಿದೆ.

ಸನವಳ್ಳಿ ಡ್ಯಾಂ ಹತ್ತಿರ ಅರಣ್ಯ ಪ್ರದೇಶದಲ್ಲಿ ಇನ್ನೊಂದು ಅನುಮಾನಾಸ್ಪದ ನಾಡ ಬಾಂಬ್ ಪತ್ತೆಯಾಗಿದ್ದು ಅರಣ್ಯ ಇಲಾಖೆಯವರು ಅದನ್ನು ವಶಪಡಿಸಿಕೊಂಡಿದ್ದು ಪರೀಕ್ಷೆಗೆ ಕಳುಹಿಸಿದ್ದಾರೆ.

######
ಬೈಕ್ಟಿಪ್ಪರ ನಡುವೆ ಮುಖಾಮುಖಿ ಡಿಕ್ಕಿ ಯುವತಿಗೆ ತೀವ್ರ ಗಾಯ
ಬೈಕ್-ಟಿಪ್ಪರ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಯುವತಿಗೆ ತೀವ್ರಗಾಯವಾಗಿ,ಯುವಕನಿಗೆ ಗಂಭೀರ ಗಾಯವಾದ ಘಟನೆ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ-ಕುಮಟಾ ರಸ್ತೆಯ ಬೇಡ್ಕಣಿ ಸಮೀಪ ಮಂಗಳವಾರ ನಡೆದಿದೆ.

ಗಾಯಗೊಂಡವರು ಸೊರಬಾ ತಾಲೂಕಿನ ಚಂದ್ರಗುತ್ತಿ ಚನ್ನಪಟ್ಟಣದ ಕಾಲೇಜ್ ವಿದ್ಯಾರ್ಥಿನಿ ರಶ್ಮಿ ಜೆ.ಪಿ.(19)ಹಾಗೂ ಸೊರಬಾ ಚಿಕ್ಕಶಕುನ ಗ್ರಾಮದ ಸಚಿನ್ ರಾಮಪ್ಪ ಹೆಚ್.(22) ಎಂದು ಗುರುತಿಸಲಾಗಿದೆ. ಯುವತಿ ಮೋಟಾರ್ ಸೈಕಲ್ ಚಲಾಯಿಸುತ್ತಿದ್ದು ತಿರುವ ರಸ್ತೆಯಲ್ಲಿ ವೇಗವಾಗಿ ಬಂದ ಟಿಪ್ಪರಗೆ ಮುಖಾಮುಖಿ ಡಿಕ್ಕಿಯಾಗಿದೆ ಪೊಲೀಸ್‍ರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

About the author

Adyot

Leave a Comment