ಮುಂಡಗೋಡನಲ್ಲಿ ಅಪರಿಚಿತರಿಂದ ವ್ಯಕ್ತಿಯ ಬರ್ಬರ ಹತ್ಯೆ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಮುಂಡಗೋಡನಲ್ಲಿ ವ್ಯಕ್ತಿಯೋರ್ವನ ಬರ್ಬರ ಹತ್ಯೆ ನಡೆದಿದ್ದು,ಹತ್ಯೆಯಾದವನು ಮುಂಡುಗೋಡು ಬೆಂದ್ರಳದ ಹರ್ಷ ಯಾನೆ ಸುದರ್ಶನ ಗಿಟ್ಟಿ(42)ಎಂದು ಗುರುತಿಸಲಾಗಿದೆ.

ಮುಂಡುಗೋಡ ಬಡ್ಡಿಗೇರಿ ಕ್ರಾಸ್ ಬಳಿ ಇಂದು ಸಂಜೆ 5.30 ರ ಸುಮಾರಿಗೆ ಬೈಕ್ ನಲ್ಲಿ ಹೋಗುವಾಗ ಈ ಘಟನೆ ನಡೆದಿದೆ.ವಾಹನದಲ್ಲಿ ಬಂದ ಇಬ್ಬರು ಅಪರಿಚಿತರು ತಲವಾರಿನಿಂದ ಹಿಗ್ಗಾಮುಗ್ಗಾ ಕಡಿದು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ದಾವಣಗೆರೆ, ಮಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಹಾಗೂ ಫ್ಲೈವುಡ್ ವ್ಯಾಪಾರ ನಡೆಸುತ್ತಿದ್ದ ಸುದರ್ಶನ್ ಹಲವು ಸಂಘಟನೆಗಳಲ್ಲೂ ಗುರುತಿಸಿಕೊಂಡಿದ್ದ.
ಮುಂಡಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು
ವಯಕ್ತಿಕ ಕಾರಣಗಳೇ ಕೃತ್ಯಕ್ಕೆ ಕಾರಣ ಎಂದು ಪೊಲೀಸರಿಂದ
ಪ್ರಾಥಮಿಕ ಮಾಹಿತಿ ದೊರಕಿದೆ

ಮುಂಡಗೋಡು ತಾಲೂಕಿನ ಕಾಜುಗಾರ ಮಂಜು ಎನ್ನುವವನು ಕಳೆದ 5-6ತಿಂಗಳ ಹಿಂದೆ ಕೊಲೆಯಾದ ಹುಬ್ಬಳ್ಳಿಯ
ನಟೋರಿಯಸ್ ಪ್ರೂಟ್ ಇರ್ಫಾನ್ ಸಹಚರನಾಗಿದ್ದು ಕೊಲೆಯಾದ ಹರ್ಷನ ಜೊತೆ ವಯಕ್ತಿಕ ದ್ವೇಷ ಹೊಂದಿದ್ದ ಎನ್ನಲಾಗಿದೆ ಈ ಬರ್ಬರ ಕೊಲೆಯ ಹಿಂದೆ ಇವನ ಕೈವಾಡ ಇರುವ ಬಗ್ಗೆ ಪೊಲೀಸ್ ಇಲಾಖೆ ಸಂಶಯ ವ್ಯಕ್ತಪಡಿಸಿದೆ.

About the author

Adyot

Leave a Comment