ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಮಜ್ಜಿಗೇರಿ ಗ್ರಾಮದ ಮೂವರು ಅತ್ಯಚಾರಿ ಆರೋಪಿಗಳಿಗೆ ಶಿಕ್ಷೆ ಪ್ರಕಟವಾಗಿದೆ.
ಅಗಸ್ಟ್-2014ರಲ್ಲಿ ಮುಂಡಗೋಡು ಪೊಲೀಸ್ ಠಾಣಾ ವ್ಯಾಪ್ತಿಯ ಮಜ್ಜಿಗೇರಿ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ
ಅದೇ ಗ್ರಾಮದ ನಾಗರಾಜ ಭರಮಣ್ಣ ಬೋವಿವಡ್ಡರ,ರಮೇಶ ಯಲ್ಲಪ್ಪ ಬೋವಿ,ಮಂಜುನಾಥ ಹನುಮಂತಪ್ಪ ಹಾವೇರಿ ಅತ್ಯಾಚಾರ ಎಸಗಿದ್ದರು ಎಂದು ಆರೋಪಿಸಲಾಗಿತ್ತು
ಮುಂಡಗೋಡ ಠಾಣೆಯ ಪಿ.ಐ.ಹೆಚ್.ಕೆ.ಪಠಾಣ ತನಿಖೆ ನಡೆಸಿ ಆರೋಪಿಗಳ ಮೇಲೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು
ಸರಕಾರದ ಪರವಾಗಿ ವಿಶೇಷ ಅಭಿಯೋಜಕ ಸುಭಾಷ ಪಿ.ಖೈರಾನ್ ವಾದಮಂಡಿಸಿದ್ದರು.
ಭುದವಾರ ಕಾರವಾರದ ಜಿಲ್ಲಾ ಮತ್ತು ಸತ್ರ ವಿಶೇಷ ನ್ಯಾಯಾಲಯದ FTSC-1(CFC)ನ್ಯಾಯಾಧೀಶ ಶಿವಾಜಿ ಅನಂತ ನಾಲ್ವಡೆ ಮೂವರು ಆರೋಪಿಗಳಿಗೆ ಶಿಕ್ಷೆ ಪ್ರಕಟಿಸಿದ್ದು ಮೊದಲ ಆರೋಪಿ ನಾಗರಾಜ ಭರಮಣ್ಣ ಬೋವಿವಡ್ಡರಗೆ ಹತ್ತು ವರ್ಷ ಶಿಕ್ಷೆ,ಎರಡು ಮತ್ತು ಮೂರನೆ ಆರೋಪಿಗಳಾದ ರಮೇಶ ಯಲ್ಲಪ್ಪ ಬೋವಿ ಹಾಗೂ ಮಂಜುನಾಥ ಹನುಮಂತಪ್ಪ ಹಾವೇರಿಗೆ ತಲಾ ಏಳು ವರ್ಷ ಶಿಕ್ಷೆ ಹಾಗೂ 30 ಸಾವಿರ ರೂ. ದಂಡವಿಧಿಸಿದ್ದಾರೆ.