ಸಭಾಧ್ಯಕ್ಷರಿಂದ ಮೈಸೂರು ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ

ಆಧ್ಯೋತ್ ಸುದ್ದಿನಿಧಿ:
ಪಂ.ವಿನಾಯಕ ತೊರವಿಯವರಿಗೆ ರಾಜ್ಯಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ
ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದ ಅಂಗವಾಗಿ ಶನಿವಾರ ಸಂಜೆ ಅಂಬಾವಿಲಾಸ ಅರಮನೆ ಆವರಣದಲ್ಲಿ
ನಡೆದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಿದರು.ಇದೇ ಸಂದರ್ಭದಲ್ಲಿ ಸಂಗೀತ ಲೋಕದ ಸಾಧಕ ಪಂ ವಿನಾಯಕ ತೊರವಿಯವರಿಗೆ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪಂ.ತೊರವಿ,ಸಾಹಿತ್ಯ,ಕಲೆ,ಸಂಸ್ಕøತಿ ಉಳಿಸಲು ಕರ್ನಾಟಕ ಶ್ರಮಿಸಿದಷ್ಟು ಬೇರೆ ಯಾವ ರಾಜ್ಯದಲ್ಲೂ ಮಾಡುವುದಿಲ್ಲ ರಾಜ್ಯ ಸರಕಾರ ನನ್ನ ಸಾಧನೆಯನ್ನು ಗುರುತಿಸಿದ್ದು ಆನಂದ ಮತ್ತು ಹೆಮ್ಮೆ ಎನಿಸಿದೆ. ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ಅದೂ ಧಾರವಾಡದಲ್ಲಿ ಹುಟ್ಟಬೇಕು. ಉತ್ತರಕರ್ನಾಟಕ ಭಾಗದಲ್ಲಿ ಬಾರಿಮಳೆಗೆ ಪ್ರವಾಹ ಪರಿಸ್ಥಿತಿ ತಲೆದೋರಿದೆ ಇದು ಪ್ರತೀವರ್ಷದ ಸಮಸ್ಯೆಯಾಗುತ್ತಿದ್ದು ಜನರು ಸಂಕಷ್ಟದಲ್ಲಿ ಮುಳುಗಿದ್ದಾರೆ.ಪ್ರಶಸ್ತಿ ಜೊತೆಗೆ ನನಗೆ ನೀಡಿದ 5ಲಕ್ಷರೂ. ನಲ್ಲಿ ಮುಖ್ಯಮಂತ್ರಿಪರಿಹಾರ ನಿಧಿಗೆ 1 ಲಕ್ಷರೂ. ನೀಡುತ್ತೇನೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿಮಾತನಾಡಿದ ಸಭಾಧ್ಯಕ್ಷ ವಿಶ್ವೇಶ್ವರಹೆಗಡೆಕಾಗೇರಿ, ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸಲು ಇಂತಹ ಸಾಂಸ್ಕತಿಕ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದ್ದು ಇದರಲ್ಲಿ ಕೇವಲ ಮನೋರಂಜನೆ ಉದ್ದೇಶವಷ್ಟೆ ಅಲ್ಲ ನಮ್ಮ ಸಂಸ್ಕಾರ,ಸಂಸ್ಕೃತಿ ನಾಡಿನಾದ್ಯಂತ ವಿಸ್ತರಿಸಲು ರಾಜ್ಯದ ಬೆರೆ ಬೇರೆ ಕಡೆಯಲ್ಲಿ ಸಾಂಸ್ಕøತಿಕ ಕಾರ್ಯಕ್ರಮ ನಡೆಸಬೇಕು ಎಂದು ಹೇಳಿದರು.
ವಚ್ಯುವಲ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಅದ್ದೂರಿಯಾಗಿ ಆಚರಿಸಬೇಕಿದ್ದ ದಸರಾ ಕೊವಿಡ್ ಹಿನ್ನಲೆಯಲ್ಲಿ ಸರಳವಾಗಿ ಆಚರಿಸಲಾಗುತ್ತಿದೆ ಇದಕ್ಕೆ ಸಾರ್ವಜನಿಕರ ಸಹಕಾರ ಅವಶ್ಯಕ ಜನರು ವಚ್ರ್ಯುವಲ್ ಮೂಲಕ ದಸರಾ ಕಾರ್ಯಕ್ರಮವನ್ನು ಮನೆಯಲ್ಲೆ ಕುಳಿತು ವೀಕ್ಷಿಸಬೇಕು ಕಟ್ಟುನಿಟ್ಟಾಗಿ ಮಾಸ್ಕ ಧರಿಸುವುದು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮಾಡಬೇಕು ಎಂದು ಹೇಳಿದರು.
ಉಸ್ತುವಾರಿ ಸಚೀವ ಎಸ್.ಟಿ.ಸೋಮಶೇಖರ ಮಾತನಾಡಿ,ಮೈಸೂರು ದಸರಾವನ್ನು ಸಾಂಸ್ಕøತಿಕವಾಗಿ ಮತ್ತು ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತಿದೆ ಜೊತೆಗೆ ವಚ್ರ್ಯುವಲ್ ವ್ಯವಸ್ಥೆ ಮಾಡಲಾಗಿದೆ ಕೊವಿಡ ಆತಂಕವಿರುವುದರಿಂದ ಜನರ ಆರೋಗ್ಯವೂ ಮುಖ್ಯವಾಗಿರುವುದರಿಂದ ದಸರಾ ಸಾಂಸ್ಕøತಿಕ ಕಾರ್ಯಕ್ರಮವನ್ನು ಚಾಮುಂಡಿ ಬೆಟ್ಟ ಮತ್ತು ಅರಮನೆ ವೇದಿಕೆಗೆ ಸೀಮಿತಗೊಳಿಸಲಾಗಿದೆ. ಜನರು ಮನೆಯಲ್ಲೆ ಕುಳಿತು ದಸರಾ ಕಾರ್ಯಕ್ರಮವನ್ನು ವೀಕ್ಷಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕøತಿ ಸಚೀವ ಸಿ.ಟಿ.ರವಿ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ,ಮೇಯರ್ ತಸ್ವಿಂ,ಶಾಸಕ ಎ.ರಾಮದಾಸ, ಎಲ್.ನಾಗೇಂದ್ರ,ಹರ್ಷವರ್ಧನ,ವಿಧಾನಪರಿಷತ್ ಸದಸ್ಯ ಎ.ವಿಶ್ವನಾಥ, ಮೂಡಾ ಅಧ್ಯಕ್ಷ ಎಚ್.ವಿ.ರಾಜೀವ ಉಪಸ್ಥಿತರಿದ್ದರು.

About the author

Adyot

1 Comment

Leave a Comment