ಮೈಸೂರು : ಮೈಸೂರಿನ ರಾಮಕೃಷ್ಣ ನಗರದ ಗಣಪತಿ ದೇವಸ್ಥಾನದಲ್ಲಿ ಸ್ಥಳೀಯ ಮಹತಿ ಸಂಗೀತ ಶಾಲೆಯ ವತಿಯಿಂದ ತ್ಯಾಗರಾಜರ ಮತ್ತು ಪುರಂದರದಾಸರ ಆರಾಧನಾ ಮಹೋತ್ಸವವನ್ನು ಏರ್ಪಡಿಸಲಾಗಿತ್ತು.
ಸನಾತನ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ರಾಮಕೃಷ್ಣ ವಿದ್ಯಾಸಂಸ್ಥೆಯ ಡಾ.ಸರಸ್ವತಿ ರಾಮಕೃಷ್ಣ ಹಾಗೂ ಹಿರಿಯ ಕ್ರಿಕೆಟಿಗ ಜಾವಗಲ್ ಶ್ರೀನಾಥ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಆಯೋಜಿಸಿದ್ದ ಸಂಗೀತ ಶಾಲೆಯ ವಿ.ಭಾಗ್ಯಲಕ್ಷ್ಮಿ ಸ್ವಾಗತಿಸಿದರು.ಸಂಗೀತ ಶಾಲೆಯ ಹಿರಿ-ಕಿರಿಯ ವಿದ್ಯಾರ್ಥಿಗಳು ಗಾಯನ ನಮನ ಸಲ್ಲಿಸಿದರು.