ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯಲ್ಲಿ ಕೊವಿಡ್ ಪ್ರಮಾಣ ಹೆಚ್ಚಾಗುತ್ತಿದ್ದು ಶನಿವಾರ 637 ಕೊವಿಡ್ ಪ್ರಕರಣ ದಾಖಲಾಗಿದ್ದು 6997ಕ್ಕೆ ಏರಿಕೆ ಕಂಡಿದೆ.16 ಜನರು ಸಾವನ್ನು ಕಂಡಿದ್ದು ಜಿಲ್ಲೆಯ 19
ಗ್ರಾಮಪಂಚಾಯತನ್ನು ಸೀಲ್ ಡೌನ್ ಮಾಡಲಾಗಿದೆ.
ಸೀಲ್ ಡೌನ್ ಆಗಿರುವ ಗ್ರಾಪಂಗಳು–
ಕಾರವಾರ–ಚಿತ್ತಾಕುಲ,ಮಲ್ಲಾಪುರ,ಅಂಕೋಲ–ಬೊಬ್ರುವಾಡ,ಹಿಲ್ಲೂರು,ಹೊನ್ನಾವರ–ಕರ್ಕಿ,ಭಟ್ಕಳ–ಶಿರಾಲಿ,ಶಿರಸಿ- ಬನವಾಸಿ,ಯಲ್ಲಾಪುರ–ಮಾವಿನಮನೆ,ಉಮಚಗಿ,ನಂದೊಳ್ಳಿ,ಮುಂಡಗೋಡು–ಇಂದೂರು,ಜೊಯಿಡಾ-ಅಖೇತಿ,ರಾಮನಗರ,ದಾಂಡೇಲಿ–ಅಂಬಿಕಾನಗರ,ಅಂಬೇವಾಡಿ,ಹಳಿಯಾಳ–ಮುರ್ಕವಾಡಿ,ಸಿದ್ದಾಪುರ–ಅಣಲೇಬೈಲ್,ಕೋಲಸಿರ್ಸಿ,ಮನಮನೆ
#####
ಜಿಲ್ಲೆಯಲ್ಲಿ ಕೋವಿಡ್ ಸೋಂಕು ತೀವ್ರಗತಿಯಲ್ಲಿ ಹರಡುತ್ತಿರುವುದರಿಂದ, ಸೋಂಕು ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಲಾಕ್ ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಉಸ್ತುವಾರಿ ಸಚೀವ ಶಿವರಾಮ ಹೆಬ್ಬಾರ ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದ್ದಾರೆ.
ಶನಿವಾರದಿಂದ ಜಿಲ್ಲೆಯಲ್ಲಿ ಮದುವೆ ಕಾರ್ಯಕ್ರಮಗಳಿಗೆ ಅನುಮತಿ ನೀಡದಿರಲು ನಿರ್ದರಿಸಿದೆ.
ಈಗಾಗಲೇ ಅನುಮತಿ ನೀಡಿರುವಂತಹ ಮದುವೆ ಕಾರ್ಯಕ್ರಮಗಳನ್ನು ಕೇವಲ 20ಜನರೊಂದಿಗೆ ಮಾತ್ರ ನಡೆಸುವಂತೆ ನೋಡಿಕೊಳ್ಳುವುದು. ಈ ಸಂಬಂಧ ಆಯಾ ಗ್ರಾಮಲೆಕ್ಕಿಗರು/ಪಿಡಿಓಗಳು ಮದುವೆ ಕಾರ್ಯಕ್ರಮದಲ್ಲಿ ಅನುಮತಿಸಲಾದ 20 ಜನಕ್ಕಿಂತ ಹೆಚ್ಚು ಜನ ಸೇರಿಲ್ಲವೆಂಬುದರ ಬಗ್ಗೆ ಹಾಗೂ ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ವಿಡಿಯೋಗ್ರಾಫಿ ಮೂಲಕ ಖಚಿತಪಡಿಸಿಕೊಳ್ಳುವುದು.
ಪ್ರಸ್ತುತ ಜಾರಿಯಲ್ಲಿರುವಂತಹ ಕರ್ಫ್ಯೂ ಅವಧಿಯಲ್ಲಿ ಯಾವುದೇ ಖಾಸಗೀ ವಾಹನಗಳ ಸಂಚಾರವನ್ನು (ವೈದ್ಯಕೀಯ ತುರ್ತು ಸೇವೆಗಳನ್ನು ಹಾಗೂ ಸರಕಾರಿ ನೌಕರರನ್ನು ಅಧಿಕೃತ ಗುರುತಿನ ಚೀಟಿ ಇದ್ದಲ್ಲಿ ಮಾತ್ರ ಹೊರತುಪಡಿಸಿ) ಸಂಪೂರ್ಣವಾಗಿ ನಿಷೇಧಿಸುವುದು.
ಪಂಚಾಯತ್ ಗಳಲ್ಲಿ/ನಗರ ಪ್ರದೇಶದಲ್ಲಿ ಯಾವುದೇ ವಾರ್ಡ್ ಗಳಲ್ಲಿ 40 ಕ್ಕಿಂತ ಹೆಚ್ಚು ಆ್ಯಕ್ಟಿವ್ ಪಾಸಿಟಿವ್ ಪ್ರಕರಣಗಳು ಇದ್ದಲ್ಲಿ ಅದನ್ನು ವಿಶೇಷ ಕಂಟೈನ್ ಮೆಂಟ್ ವಲಯವನ್ನಾಗಿ ಮಾಡಿ ಸೋಂಕು ಹರಡದಂತೆ ಕಟ್ಟುನಿಟ್ಟಿನ ಅಗತ್ಯ ಕ್ರಮ ಕೈಗೆೊಳ್ಳುವುದು.ಕಾರವಾರ ಮತ್ತು ದಾಂಡೇಲಿ ನಗರ ಪ್ರದೇಶಗಳನ್ನು ವಿಶೇಷ ಕಂಟೈನ್ ಮೆಂಟ್ ವಲಯಗಳನ್ನಾಗಿ ಘೋಷಣೆ ಮಾಡಿ, ಸದ್ರಿ ಪ್ರದೇಶಗಳಲ್ಲಿ ನಗರ ಸ್ಥಳೀಯ ಸಂಸ್ಥೆಗಳು ಸೋಂಕಿನ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಜರುಗಿಸುವುದು.
ದಿನಾಂಕ: 01.05.2021 ರಿಂದ 12.05.2021 ರವರೆಗೆ ಹೆಚ್ಚು ಕೋವಿಡ್ ಸೋಂಕಿನ ಪ್ರಕರಣಗಳನ್ನು ಹೊಂದಿರುವ ಗ್ರಾಮ ಪಂಚಾಯತಿಗಳನ್ನು ವಿಶೇಷ ಕಂಟೈನ್ ಮೆಂಟ್ ವಲಯಗಳನ್ನಾಗಿ ಘೋಷಣೆ ಮಾಡಿ, ಸದ್ರಿ ಪ್ರದೇಶಗಳಲ್ಲಿನ ಗ್ರಾಮ ಪಂಚಾಯತಿಗಳು ಸೋಂಕಿನ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಜರುಗಿಸುವುದು.ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್ ಪರೀಕ್ಷೆಯನ್ನು ನಡೆಸಲು ಸೂಚಿಸಲಾಗಿದೆ.
#####
ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿ ಕೊವಿಡ್
ಪ್ರಕರಣ ಹೆಚ್ಚಳವಾಗುತ್ತಿದ್ದು ಅಣಲೇಬೈಲ್, ಕೋಲಸಿರ್ಸಿ,ಮನಮನೆ ಗ್ರಾಪಂನ ಒಟ್ಟೂ 25 ಗ್ರಾಮಗಳನ್ನು ಸೀಲ್‍ಡೌನ್ ಮಾಡಲಾಗಿದೆ.
40 ಪ್ರಕರಣಗಳಿಗಿಂತ ಹೆಚ್ಚು ಪ್ರಕರಣಗಳು ಕಂಡುಬಂದರೆ ಅಂತಹ ಗ್ರಾಮವನ್ನು ಸೀಲ್‍ಡೌನ್ ಮಾಡಲು ಜಿಲ್ಲಾಡಳಿತ ತೀರ್ಮಾನಿಸಿದೆ. ಹೇರೂರು ಗ್ರಾಪಂನ 11 ಗ್ರಾಮಗಳನ್ನು ಸೀಲ್‍ಡೌನ್ ಮಾಡಲಾಗಿದ್ದು ಇಲ್ಲಿ 850 ಕುಟುಂಬಗಳಿದ್ದು 4200 ಜನಸಂಖ್ಯೆ ಇದೆ, ಕೋಲಸಿರ್ಸಿ ಗ್ರಾಪಂನಲ್ಲೂ 11 ಗ್ರಾಮಗಳನ್ನು ಸೀಲ್‍ಡೌನ್ ಮಾಡಲಾಗಿದ್ದು 1608 ಕುಟುಂಬವಿದ್ದು 5246 ಜನಸಂಖ್ಯೆ ಇದೆ. ಮನಮನೆ ಗ್ರಾಪಂನಲ್ಲಿ 3 ಗ್ರಾಮಗಳನ್ನು ಸೀಲ್‍ಡೌನ್ ಮಾಡಲಾಗಿದೆ. 927 ಕುಟುಂಬವಿದೆ 3022 ಜನಸಂಖ್ಯೆ ಇದೆ.
ಸೀಲ್ ಡೌನ್ ಆಗಿರುವ ಗ್ರಾಮಗಳಿಗೆ ದಿನಸಿ ಹಾಗೂ ಅಗತ್ಯ ವಸ್ತುಗಳ ಸರಬರಾಜು ಮಾಡಲು ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಲಾಗಿದೆ.ಆರೊಗ್ಯ ಸಮಸ್ಯೆಗಳ ಬಗ್ಗೆ ಪ್ರತಿದಿನ ವಿಚಾರಿಸಲು ಆಶಾಕಾರ್ಯಕರ್ತರು ಭೇಟಿ ನೀಡುತ್ತಾರೆ. ಉಳಿದಂತೆ ತಾಲೂಕು ಆಡಳಿತ ಪ್ರತಿಗ್ರಾಮದ ಮೇಲೂ ವಿಶೇಷ ನಿಗಾ ಇರಿಸುತ್ತದೆ. ಇಲ್ಲಿಯ ಜನರು ಯಾವುದೇ ಕಾರಣಕ್ಕೂ ಮನೆಯಿಂದ ಹೊರಗೆ ಬರಬಾರದೆಂದು ಸೂಚಿಸಲಾಗಿದೆ.