“ನಾ ಅದೀನಿ” ಕಿರುಚಿತ್ರದ ಚಿತ್ರೀಕರಣ ಮುಕ್ತಾಯ

ಆದ್ಯೋತ್ ಸುದ್ದಿನಿಧಿ: ‘ನಾಅದೀನಿಕಿರುಚಿತ್ರದ ಚಿತ್ರೀಕರಣ ಮುಕ್ತಾಯ
ಕುತೂಹಲ ಮೂಡಿಸಿರುವ ನಾ ಅದೀನಿ ಕಿರುಚಿತ್ರದ ಚಿತ್ರೀಕರಣ ಇತ್ತೀಚೆಗೆ ಗದಗ ಸಮೀಪದ ನಾಗಸಮುದ್ರದಲ್ಲಿ ಮುಕ್ತಾಯಗೊಂಡಿತು.
ಇತ್ತೀಚೆಗೆ ಬೆಟಗೇರಿಯ ಹೊಸಪೇಟೆ ಚೌಕ್‌ನಲ್ಲಿರುವ ಶ್ರೀ ಕಾಳಿಕಾದೇವಿ ದೇವಸ್ಥಾನದಲ್ಲಿ ಚಿನ್ಮಯಗಾಯತ್ರಿ ಕ್ರಿಯೇಷನ್ಸ್ ಬ್ಯಾನರನಡಿಯಲ್ಲಿ ನಿರ್ಮಿಸಲಾಗುತ್ತಿರುವ ‘ನಾ ಅದೀನಿ’ ಕನ್ನಡ ಕಿರುಚಿತ್ರದ ಮಹೂರ್ತ ಸಮಾರಂಭ ನೆರವೇರಿಸಲಾಗಿತ್ತು.

ನಗರದ ಹಿರಿಯ ರಂಗಕಲಾವಿದರ ಜೊತೆಗೆ ಹೊಸ ಕಲಾವಿದರನ್ನು ಒಳಗೊಂಡು ಕಿರುಚಿತ್ರವನ್ನು ನಿರ್ಮಿಸುವ ಮೂಲಕ ಕಿರುತೆರೆ ಚಿತ್ರ ನಿರ್ಮಾಣಕ್ಕೆ ತೊಡಗುವ ಉದ್ದೇಶ ಹೊಂದಿರುವ ನಿರ್ದೇಶಕ ಬಿ.ಮೌನೇಶರು ಮೊದಲ ಪ್ರಯತ್ನದಲ್ಲಿ ಯಶಸ್ಸನ್ನು ಕಂಡಿದ್ದಾರೆ.
ಚಿತ್ರೀಕರಣವನ್ನು ಅಚ್ಚುಕಟ್ಟಾಗಿ ಮುಗಿಸಿ ಇದೀಗ ಸಂಕಲನ , ಡಬ್ಬಿಂಗ್ ಕಾರ್ಯ ಭರ್ಜರಿಯಾಗಿ ನಡೆಸಿದ್ದಾರೆ. ಕಳೆದ ಕೆಲವು ತಿಂಗಳ ಹಿಂದೆ ಜಗತ್ತನ್ನೆ ಕಾಡಿದ ಕೊವಿಡ್ ಪ್ರಭಾವದ ಹಿನ್ನಲೆಯಲ್ಲಿ ಅನೇಕ ಸಮಸ್ಯೆಗಳು ಉದ್ಬವವಾಗಿದ್ದು ಅದರಲ್ಲಿನ ಒಂದು ಕಥೆಯ ಎಳೆಯನ್ನು ಚಿತ್ರಕ್ಕೆ ಅಳವಡಿಸಿಕೊಂಡು ಚಿತ್ರಕಥೆ, ಸಂಭಾಷಣೆಯ ಜೊತೆಗೆ ನಿರ್ದೇಶನ ಹೊಣೆಯನ್ನು ಬಿ. ಮೌನೇಶ ನಿರ್ವಸಿದ್ದಾರೆ. ಸಹ ನಿರ್ದೇಶಕರಾಗಿ ಡಾ. ಪ್ರಭು ಗಂಜೀಹಾಳ, ಸಂಕಲನ ಹಾಗೂ ಛಾಯಾಗ್ರಹಣ ಚಂದ್ರು ಗುಡ್ಡಿಮಠ, ಉಮೇಶ ಸಜ್ಜನ, ಪ್ರಚಾರಕಲೆ ಡಾ ವಿರೇಶ ಹಂಡಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ತಾರಾಗಣದಲ್ಲಿ ತುಳಸಿದಾಸ, ಮುರಲೀಧರ ಸಂಕನೂರ, ಗಾಯತ್ರಿ ಹಿರೇಮಠ, ಸುನಂದಾ ಹಿರೇಮಠ, ವಿಶ್ವನಾಥ ಬೇಂದ್ರೆ, ರಾಜು(ರಾಚಯ್ಯ) ಹೊಸಮಠ, ಅವಿನಾಶ ಗಂಜೀಹಾಳ, ಬುಡ್ಡಾ ಆಲೂರ, ರಿಯಾಜ್ ರಾಹುತ್, ಖಾಜಾಸಾಬ ಬೂದಿಹಾಳ , ಪತ್ರಕರ್ತ ಸುನೀಲಸಿಂಗ್ ಲದ್ದಿಗೇರಿ ಇತರರು ಮನೋಜ್ಞವಾಗಿ ಅಭಿನಯಿಸಿದ್ದಾರೆ.
**********************************

**********************************

About the author

Adyot

Leave a Comment