ಆದ್ಯೋತ್ ಸುದ್ದಿನಿಧಿ:
ಎನ್ ಎಸ್.ಎಮ್.ಎಸ್ ಲಾಂಛನದಲ್ಲಿ ದೇಕಾ ಜಿ ಕುಂಬಾರ್ ನಿರ್ಮಾಣದ ನಮ್ ಕನ್ನಡ ಕಿರುಚಿತ್ರದ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು ಅಕ್ಟೋಬರ್-25 ರವಿವಾರ ಟ್ರೈಲರ್ ಬಿಡುಗಡೆಯಾಗಲಿದೆ.
ಕನ್ನಡ ನಾಡು -ನುಡಿ ಭಾಷೆ ಕನ್ನಡಿಗರ ಸ್ಥಾನಮಾನಗಳ ಬಗ್ಗೆ ಕಥೆಯ ಹಂದರವನ್ನೊಳಗೊಂಡು ಕನ್ನಡಿಗರು ಅನುಭವಿಸುವ ಯಾತನೆಗಳು,ನೋವುಗಳನ್ನು ಎಳೆ ಎಳೆಯಾಗಿ ಬಿಡಿಸಿಡುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಲಾಗುತ್ತಿದೆ.
ಇದು ಕನ್ನಡ ರಾಜ್ಯೋತ್ಸವಕ್ಕೆ ಬಿಡುಗಡೆಯಾಗುತ್ತಿದ್ದು ಕನ್ನಡಿಗರಿಗಾಗಿ ನಿರ್ಮಿಸಲಾಗುತ್ತಿರುವುದಲ್ಲದೆ,ತಿಳುವಳಿಕೆಯ ಪಾಠ ಕೂಡ ಇದರಲ್ಲಿದೆ.
ಇಂಗ್ಲೀಷ್ ಮೀಡಿಯಂ ಸ್ಕೂಲ್ ಗೆ ಸೇರಿದ ವಿದ್ಯಾರ್ಥಿನಿಯೊಬ್ಬಳು ಅಲ್ಲಿ ಇಂಗ್ಲೀಷ್ ಮತ್ತು ಹಿಂದಿ ಹೇರಿಕೆಯಿಂದಾಗಿ ಪ್ರತಿನಿತ್ಯ ಗೋಳಾಡಬೇಕಾಗುತ್ತದೆ.
ವಿದ್ಯಾರ್ಥಿನಿ ಕನ್ನಡ ಭಾಷೆ,ಕನ್ನಡದ ಸ್ಥಾನಮಾನ,ಕನ್ನಡದ ಸಂಸ್ಕೃತಿಯನ್ನು ಎತ್ತಿ ತೋರಿಸುವುದಲ್ಲದೆ ಹಿಂದಿ ಭಾಷೆ ರಾಷ್ಟ್ರಭಾಷೆ ಎಂದು ಬಿಂಬಿಸುವ ಶಿಕ್ಷಕರಿಗೆ ಹಿಂದಿ ರಾಷ್ಟ್ರ ಭಾಷೆಯಲ್ಲ, ಸಂವಿಧಾನದ ಪ್ರಕಾರ 33 ಭಾಷೆಗಳು ಸಮಾನವಾದದ್ದು ಎಂದು ತಿಳಿಹೇಳುವ ಪಾಠವೂ ಚಿತ್ರದಲ್ಲಿದೆ.
ಜೊತೆಗೆ ಎಲ್ಲ ವೃತ್ತಿಗಳಲ್ಲಿ ಇಂಗ್ಲೀಷ. ಹಿಂದಿ ಕಡ್ಡಾಯ ಎನ್ನುವದನ್ನು ಬಿಂಬಿಸುವವರ ನಡುವೆ ಕನ್ನಡ ಬಳಸುವವರ ಸಂಖ್ಯೆ ಕುಸಿಯುತ್ತಿದೆ. ಕನ್ನಡಿಗರು ಕನ್ನಡವನ್ನು ಹೆಚ್ಚು ಬಳಸುವ ಮೂಲಕ ನಮ್ಮ ಕನ್ನಡವನ್ನು ನಾವು ರಕ್ಷಿಸಬೇಕು ಎಂಬ ಸಂದೇಶವು ಈ ಕಿರುಚಿತ್ರದಲ್ಲಿದೆ.
ಈಗಾಗಲೇ ಕೊಪ್ಪಳ, ಹುಲಗಿ, ಮುನಿರಾಬಾದ್ ಸಾಣಾಪುರ ಸುತ್ತಮುತ್ತಲಿನ ಸ್ಥಳಗಳಲ್ಲಿ ಚಿತ್ರತಂಡ ಸತತ ಚಿತ್ರೀಕರಣ ನಡೆಸಲಾಗಿದೆ. ,
ಒಬ್ಬ ಮಹಿಳೆಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಬೇಕೆಂಬ ಹೆಬ್ಬಯಕೆಯಿಂದ ಮೊದಲ ಪ್ರಯತ್ನವಾಗಿ ಕಿರುಚಿತ್ರವನ್ನು ಅದರಲ್ಲೂ ಇಂದು ನಮ್ಮ ಕನ್ನಡ, ಕನ್ನಡಿಗರ ಸ್ಥಿತಿಗಳ ವಿಷಯ ಆಯ್ದುಕೊಂಡು ನಿರ್ಮಾಣ ಮಾಡುತ್ತಿದ್ದೇನೆ. ಕನ್ನಡ ರಾಜ್ಯೋತ್ಸವಕ್ಕೆ ಬಿಡುಗಡೆ ಮಾಡುತ್ತೇನೆ ಎಂದು ಕಥೆ, ಚಿತ್ರಕಥೆ, ಸಾತ್ಯ ಸಂಭಾಷಣೆಯ ಜೊತೆಗೆ ನಿರ್ಮಾಣ ಮಾಡುತ್ತಿರುವ ದೇಕಾ ಜಿ ಕುಂಬಾರ ಹೇಳಿದ್ದಾರೆ.
ನಮ್ಮಕನ್ನಡ ಚಿತ್ರದಮುಖ್ಯ ಪಾತ್ರದಲ್ಲಿ ಬೆಂಗಳೂರಿನ ಮನಿಶಾ ಅಭಿನುಸುತ್ತಿದ್ದು ಉಳಿದಂತೆ ದೇವೇಂದ್ರಪ್ಪ ಕಡ್ಡಿಪುಡಿ, ಹನುಮಂತಪ್ಪ ಗಂಗಾವತಿ, ನೀಲಮ್ಮ ಹುಲಗಿ, ಇರ್ಷಾದ ಮುನಿರಾಬಾದ,ವಿರೇಶ್ ಮುದ್ದಾಬಳ್ಳಿಯಲ್ಲದೆ ಉತ್ತರ ಕರ್ನಾಟಕದ ಕಲಾವಿದರು ಅಭಿನಯಿಸುತ್ತಿದ್ದಾರೆ.
ತಾಂತ್ರಿಕ ವರ್ಗದಲ್ಲಿ ಛಾಯಾಗ್ರಹಣ ಭಾಷಾ ಬಿಜಾಪೂರ,ಸಂಕಲನ ಕೊಪ್ಪಳದ ಡಿಜೆ ಪ್ರಕಾಸ್, ಪ್ರಚಾರಕಲೆ ಡಾ.ಪ್ರಭು ಗಂಜಿಹಾಳ್, ಡಾ.ವಿರೇಶ್ ಹಂಡಗಿ,ಸಹಾಯಕ ನಿರ್ದೇಶನ ಹೇಮಂತ್ ಬಿಜಾಪೂರ,ಸಮೀರ್ ಬಿಜಾಪುರ
ಅವರದಿದ್ದು ಬಿಜಾಪುರದ ಯುವ ನಿರ್ದೇಶಕ ಶ್ರೀನಿವಾಸ್ ನಿರ್ದೇಶನ ಮಾಡುತ್ತಿದ್ದಾರೆ.