ನೂತನ ಬಿಜೆಪಿ ಜಿಲ್ಲಾಧ್ಯಕ್ಷರುಗಳ ಘೋಷಣೆ

ಬೆಂಗಳೂರು : ರಾಜ್ಯ ಬಿಜೆಪಿ ಪದಾಧಿಕಾರಿಗಳ ಮೂರು ವರ್ಷಗಳ (2016-2019) ಅವಧಿಯು ಪೂರ್ಣಗೊಂಡ ಹಿನ್ನೆಲೆಯಲ್ಲಿ, ನೂತನ ಜಿಲ್ಲಾಧ್ಯಕ್ಷರುಗಳ ಹೆಸರನ್ನ ಘೋಷಣೆ ಮಾಡಲಾಗಿದೆ.

ರಾಜ್ಯಾಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲ್ ಹಾಗೂ ರಾಷ್ಟ್ರೀಯ ಅಧ್ಯಕ್ಷರಾಗಿ ಇತ್ತೀಚೆಗೆ ಜೆ ಪಿ ನಡ್ಡಾ ಆಯ್ಕೆಯಾಗಿದ್ದರು. ಈಗ 36 ಬಿಜೆಪಿ ಸಂಘಟನಾತ್ಮಕ ಜಿಲ್ಲೆಗಳ ಜಿಲ್ಲಾಧ್ಯಕ್ಷರ ಆಯ್ಕೆ ಕಾರ್ಯ ಕೂಡ ಆರಂಭವಾಗಿದ್ದು – ಈಗಾಗಲೇ 18 ಜಿಲ್ಲೆಗಳ ಅಧ್ಯಕ್ಷರುಗಳ ಆಯ್ಕೆ ಆಗಿತ್ತು. ಜಿಲ್ಲೆ ಹಾಗೂ ರಾಜ್ಯ ಸಮಿತಿಗಳ ಪದಾಧಿಕಾರಿಗಳು ಉಳಿದ ಜಿಲ್ಲೆಗಳ ನೂತನ ಅಧ್ಯಕ್ಷರ ಹೆಸರನ್ನು ಘೋಷಣೆ ಮಾಡಿದ್ದಾರೆ. ಈಗ ಘೋಷಣೆ ಮಾಡಿರೋ ಜಿಲ್ಲಾಧ್ಯಕ್ಷರುಗಳ ಪಟ್ಟಿ ಈ ಕೆಳಗಿನಂತಿದೆ :-

ಮೈಸೂರು ನಗರ – ಶ್ರೀವತ್ಸ
ಮೈಸೂರು ಗ್ರಾಮಾಂತರ – ಎಸ್.ಡಿ ಮಹೇಂದ್ರ
ಚಾಮರಾಜನಗರ – ಆರ್ ಸುಂದರ್
ಉಡುಪಿ – ಕುಯ್ಲಾಡಿ ಸುರೇಶ್ ನಾಯಕ್
ಉತ್ತರ ಕನ್ನಡ – ವೆಂಕಟೇಶ ನಾಯಕ್
ಬಾಗಲಕೋಟೆ – ಶಾಂತಪ್ಪಗೌಡ ಟಿ ಪಾಟೀಲ್
ರಾಯಚೂರು – ರಮಾನಂದ ಯಾದವ್
ಬಳ್ಳಾರಿ – ಚನ್ನಬಸವಗೌಡ ಪಾಟೀಲ್
ದಾವಣಗೆರೆ – ವೀರೇಶ್ ಹನಗವಾಡಿ
ಬೆಂಗಳೂರು ಗ್ರಾಮಾಂತರ – ಎ.ವಿ ನಾರಾಯಣಸ್ವಾಮಿ
ಬೆಂಗಳೂರು ಕೇಂದ್ರ – ಜಿ ಮಂಜುನಾಥ್
ಬೆಂಗಳೂರು ದಕ್ಷಿಣ – ಎನ್.ಆರ್ ರಮೇಶ್

About the author

Adyot

Leave a Comment