ಆದ್ಯೋತ್ ಸುದ್ದಿ ನಿಧಿ : ಕಳೆದೆರಡು ದಿನಗಳಿಂದ ಜಿಲ್ಲೆಗೆ ಸ್ವಲ್ಪ ರಿಲೀಫ್ ನೀಡಿದ್ದ ಕೊರೊನಾ ಮಹಾಮಾರಿ ಇಂದು ಮತ್ತೆ ತನ್ನ ಅಬ್ಬರ ಮುಂದುವರೆಸುವ ಎಲ್ಲಾ ಲಕ್ಷಣಗಳು ಗೋಚರಿಸಿವೆ. ಇಂದು ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿ 51 ವರ್ಷದ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿಯಲ್ಲಿ ಹೊಸ ಪ್ರಕರಣ ಕಾಣಿಸಿಕೊಂಡಿದೆ ಎನ್ನಲಾಗುತ್ತಿದೆ.
ಇಲ್ಲಿಯವರೆಗೆ ಜಿಲ್ಲೆಯ 9 ತಾಲೂಕುಗಳಿಗೆ ಕೊರೊನಾ ಬಾಧಿಸಿತ್ತು. ಇದೀಗ ಜಿಲ್ಲೆಯ 10 ತಾಲೂಕುಗಳಿಗೆ ಕೊರೊನಾ ಕಾಲಿಟ್ಟಂತಾಗಿದೆ. ಇಂದು ಜಿಲ್ಲೆಯಲ್ಲಿ 4 ಪ್ರಕರಣಗಳು ಕಾಣಿಸಿಕೊಂಡಿವೆ ಎನ್ನಲಾಗುತ್ತಿದ್ದು, ಸಿದ್ದಾಪುರದಲ್ಲಿ 1, ಯಲ್ಲಾಪುರದಲ್ಲಿ 2, ಹೊನ್ನಾವರದಲ್ಲಿ 1 ಪ್ರಕರಣ ಮಧ್ಯಾಹ್ನದ 12 ಗಂಟೆಯ ಬುಲೆಟಿನ್ ನಲ್ಲಿ ಅಧಿಕೃತ ಘೋಷಣೆಯಾಗಬೇಕಿದೆ. ಇದರೊಂದಿಗೆ ಜಿಲ್ಲೆಯ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗಲಿದ್ದು, ಜಿಲ್ಲೆಯಲ್ಲಿ ಒಟ್ಟೂ ಪ್ರಕರಣಗಳ ಸಂಖ್ಯೆ 73ಕ್ಕೆ ತಲುಪುವ ಸಾಧ್ಯತೆಗಳಿವೆ. ಇಲ್ಲಿಯವರೆಗೆ 35 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
OMG 😞😔