ಬೆಂಗಳೂರು : ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾಗಿದ್ದು 10 ಜನ ಶಾಸಕರು ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಬೆಂಗಳೂರಿನ ರಾಜಭವನದ ಗಾಜಿನ ಮನೆಯಲ್ಲಿ ನೂತನ ಸಚಿವರಿಗೆ ರಾಜ್ಯಪಾಲ ವಜುಭಾಯಿ ವಾಲಾ ಅಧಿಕಾರ ಹಾಗೂ ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಮಂತ್ರಿಮಂಡಲದ ಎಲ್ಲಾ ಸಚಿವರು ಹಾಗೂ ಬಿಜೆಪಿಯ ಶಾಸಕರು ಉಪಸ್ಥಿತರಿದ್ದರು. ನೂತನ ಸಚಿವರಿಗೆ ಖಾತೆ ಹಂಚಿಕೆ ಇನ್ನಷ್ಟೇ ಆಗಬೇಕಿದೆ.
ನೂತನ ಸಚಿವರ ಪಟ್ಟಿ ಇಂತಿದೆ.
1. ಎಸ್.ಟಿ ಸೋಮಶೇಖರ್
2. ರಮೇಶ್ ಜಾರಕಿಹೋಳಿ
3. ಆನಂದ್ ಸಿಂಗ್
4. ಡಾ.ಸುಧಾಕರ್
5. ಬಿ.ಎ ಬಸವರಾಜ್
6. ಶಿವರಾಮ್ ಹೆಬ್ಬಾರ್
7. ಬಿ.ಸಿ ಪಾಟೀಲ್
8. ಕೆ.ಗೋಪಾಲಯ್ಯ
9. ನಾರಾಯಣಗೌಡ
10. ಶ್ರೀಮಂತ ಪಾಟೀಲ್