ಆದ್ಯೋತ್ ಸುದ್ದಿನಿಧಿ: ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದ ರಂಗಭೂಮಿ ಹಿನ್ನಲೆಯುಳ್ಳ
ಉತ್ಸಾಹಿ ಯುವಕರು ಲಾಕ್ ಡೌನ್ ಸಂದರ್ಭದಲ್ಲಿ ನಿಗೂಢ ಎನ್ನುವ ಕುತೂಹಲಕಾರಿ ಕಿರುಚಿತ್ರವನ್ನು ನಿರ್ಮಿಸಿದ್ದಾರೆ. ಮೇ.28 ಶುಕ್ರವಾರ ಈ ಕಿರುಚಿತ್ರ ಹುಲಿಮನೆ ಕ್ರಿಯೇಷನ್ಸ್ ಬ್ಯಾನರ್ ಅಡಿ ನಿರ್ಮಾಣವಾಗಿದ್ದು, ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ.
ಈ ಕಿರುಚಿತ್ರದಲ್ಲಿ ಪೂರ್ಣಚಂದ್ರ ಹೆಗಡೆ, ರಾಜಾರಾಮ್ ಭಟ್,ಅಜಿತ್ ಭಟ್, ಕೌಶಿಕ್, ಸುಮಂತ್ ಹಾಗೂ ಶಮಂತ್ ಹೆಗಡೆ ಅಭಿನಯಿಸಿದ್ದಾರೆ. ಪೂರ್ಣಚಂದ್ರ ಹೆಗಡೆಯವರು ನಿರ್ದೇಶಿಸಿದ್ದಾರೆ.
ಈಗಾಗಲೇ ನಿಗೂಢ ಕಿರುಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಸಾವಿರಾರು ವೀಕ್ಷಕರು ವೀಕ್ಷಣೆ ನಡೆಸಿದ್ದು ಪ್ರಶಂಸಿದ್ದಾರೆ. ಈ ಹಿಂದೆ ಇದೇ ತಂಡವು ಮರಿಚಿಕೆ ಹಾಗೂ ದಿ ವಿಕ್ಟಿಮ್ ಎಂಬ ಕಿರುಚಿತ್ರಗಳನ್ನು ನಿರ್ಮಿಸಿದ್ದು ಉತ್ತಮ ಪ್ರಶಂಸೆ ಪಡೆದಿದೆ.