ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಇನ್ನೆರಡು ಕೊವಿಡ್ ಪ್ರಕರಣಗಳು ದಾಖಲಾಗಿದ್ದು ಜಿಲ್ಲೆಯಲ್ಲಿ ಕೊವಿಡ್ ಪ್ರಕರಣ 85 ಕ್ಕೇರಿದಂತಾಗಿದೆ.
ಮೇ19ರಂದು ಮಹಾರಾಷ್ಟ್ರದ ಥಾಣಾ ದಿಂದ ಬಂದು ಸಿದ್ದಾಪುರ ತಾಲೂಕಿನ ಕವಂಚೂರು ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಕ್ವಾರೆಂಟೆನ್ ಲ್ಲಿದ್ದ 20 ಹಾಗೂ 18 ವಯಸ್ಸಿನ ಯುವತಿಯರಲ್ಲಿ ಕೊವಿಡ್ ಇರುವುದು ದೃಢಪಟ್ಟಿದೆ.
ಒಂದೇ ಕುಟುಂಬಕ್ಕೆ ಸೇರಿದ ಈ ಯುವತಿಯರ ತಂದೆಗೆ ಈಗಾಗಲೇ ಪೊಸಿಟಿವ್ ಇದ್ದು ಕಾರವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಿದ್ದಾಪುರದಲ್ಲಿ ಒಟ್ಟೂ ಐದು ಕೊವಿಡ್ ಪ್ರಕರಣಗಳು ದಾಖಲಾದಂತಾಗಿದೆ.