ಆದ್ಯೋತ್ ನ್ಯೂಸ್ ಡೆಸ್ಕ್ : ರಾಜ್ಯಾದ್ಯಂತ ಮಾರ್ಚ್ 31 ರವರೆಗೆ ಬಿ.ಎಂ.ಟಿ.ಸಿ ಹಾಗೂ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರವನ್ನು ಸಂಪೂರ್ಣ ಬಂದ್ ಮಾಡಿ ರಾಜ್ಯ ಆದೇಶ ಹೊರಡಿಸಿದೆ.
ಕೊರೊನಾ ರೋಗದ ಬಗ್ಗೆ ತಜ್ಞ ವೈದ್ಯರ ಜೊತೆ ಸಮಾಲೋಚನೆ ನಡೆಸಿ ಸುದ್ದಿಗೋಷ್ಠಿ ನಡೆಸಿದ ಸಿ.ಎಂ ಯಡಿಯೂರಪ್ಪ, ಮಾರ್ಚ್ 31 ರವರೆಗೆ ಸಂಪೂರ್ಣ ಬಸ್ ಸಂಚಾರವನ್ನ ಬಂದ್ ಮಾಡುತ್ತಿದ್ದೇವೆ. ದಯವಿಟ್ಟು ಜನರು ಮನೆಗಳಿಂದ ಹೊರಗಡೆ ಬರದೆ ಸರ್ಕಾರಕ್ಕೆ ಕೊರೊನಾ ಹತೋಟಿಗೆ ಸಹಕಾರ ನೀಡಬೇಕು. ಕರ್ನಾಟಕವನ್ನ ಸಂಪೂರ್ಣ ಲಾಕ್ ಡೌನ್ ಮಾಡೋದರ ಬಗ್ಗೆ ಸಂಜೆ ನಿರ್ಧಾರ ತೆಗೆದುಕೊಂಡು ಅಧಿಕೃತ ಘೋಷಣೆ ಮಾಡುತ್ತೇವೆ. ದಯವಿಟ್ಟು ಪರಿಸ್ಥಿತಿಯ ಗಂಭೀರತೆ ಅರಿತುಕೊಳ್ಳಿ. ಹಳ್ಳಿಗಳಲ್ಲಿ ರೋಗ ಇಲ್ಲದೇ ಇರೋದ್ರಿಂದ ಹಳ್ಳಿಗಳಿಗೆ ಸಂಚಾರ ಮಾಡಿ ರೋಗ ಹರಡಬೇಡಿ, ಇದ್ದಲ್ಲೇ ಇದ್ದು ಸಹಕರಿಸಿ ಎಂದರು.
Really very good decision