ಆದ್ಯೋತ್ ಸ್ಪೋರ್ಟ್ಸ್ ಡೆಸ್ಕ್ : ನ್ಯೂಜಿಲೆಂಡ್ ನ ಬೇಯ್ ಓವಲ್ ಕ್ರೀಡಾಂಗಣದಲ್ಲಿ ನಡೆದ 3ನೇ ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಭಾರತದ ವಿರುದ್ಧ ಆತಿಥೇಯ ನ್ಯೂಜಿಲೆಂಡ್ ತಂಡ ಜಯಗಳಿಸುವುದರೊಂದಿಗೆ ಸರಣಿಯನ್ನ ಕ್ಲೀನ್ ಸ್ವೀಪ್ ಮಾಡಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡ ಕೆ.ಎಲ್ ರಾಹುಲ್(112) ಹಾಗೂ ಶ್ರೇಯಸ್ ಅಯ್ಯರ್(62) ರನ್ ಗಳ ನೆರವಿನಿಂದ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 296 ರನ್ ಗಳಿಸಿತು. 297 ರನ್ ಗಳ ಗುರಿಯನ್ನು ಬೆನ್ನತ್ತಿದ ನ್ಯೂಜಿಲೆಂಡ್ ತಂಡ ನಿಕೋಲ್ಸ್(80), ಮಾರ್ಟಿನ್ ಗುಪ್ಟಿಲ್(66) ಹಾಗೂ ಗ್ರ್ಯಾಂಡ್ ಹೋಮ್(58) ರನ್ ಗಳ ನೆರವಿನಿಂದ 47.1 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು ಸುಲಭದ ಜಯ ದಾಖಲಿಸಿತು. ಇದರೊಂದಿಗೆ 3 ಪಂದ್ಯಗಳ ಏಕದಿನ ಸರಣಿಯನ್ನ ನ್ಯೂಜಿಲೆಂಡ್ 3-0 ದೊಂದಿಗೆ ಕ್ಲೀನ್ ಸ್ವೀಪ್ ಸಾಧಿಸಿತು.
🤔🤔