ಅಂಕೋಲಾ : ಜಿಲ್ಲೆಯ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನಳ್ಳಿಯ ಹಾಲಕ್ಕೀ ಜನಾಂಗದ ಮಹಿಳೆ ಹಾಗೂ ಅರಣ್ಯ ವಿಶ್ವಕೋಶ ಅಂತಾನೇ ಪರಿಚಿತರಾಗಿರೋ ತುಳಸೀಗೌಡರಿಗೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಘೋಷಣೆಯಾಗಿದೆ.
ಪ್ರತಿವರ್ಷ ಕೊಡಲಾಗುವ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಈ ಸಲ ನಮ್ಮ ಜಿಲ್ಲೆಯ ತುಳಸೀಗೌಡರಿಗೆ ಒಲಿದದ್ದು ಜಿಲ್ಲೆಗೆ ಹೆಮ್ಮೆ ತಂದಂತಾಗಿದೆ. ಪರಿಸರ ವಿಭಾಗದ ಸಮಾಜ ಸೇವೆ ವಿಭಾಗದಲ್ಲಿ ಪದ್ಮಶ್ರೀ ಪ್ರಶಸ್ತಿ ದೊರಕಿದೆ. 72 ವರ್ಷ ವಯಸ್ಸಿನ ವೃಕ್ಷಮಾತೆ ತುಳಸಿಗೌಡ ಈವರೆಗೆ ಲಕ್ಷಾಂತರ ಮರಗಳನ್ನು ನೆಟ್ಟು ಬೆಳೆಸಿದ ಕೀರ್ತಿ ಪಡೆದಿದ್ದಾರೆ. ಅದೇ ರೀತಿ ಅನೇಕ ವಿಧದ ಔಷಧಿ ಸಸ್ಯಗಳ ಗಿಡಮೂಲಿಕೆಗಳ ಪರಿಚಯ ಇರೋ ತುಳಸೀ ಗೌಡ ಮುಂದಿನ ಜನಾಂಗಕ್ಕೂ ಕೂಡ ಇದರ ಬಗ್ಗೆ ತಿಳುವಳಿಕೆಗಳನ್ನ ನೀಡುತ್ತಿದ್ದಾರೆ.
ತುಂಬಾ ಸಂತೋಷ ಹಾಗೂ ಹೆಮ್ಮೆಯ ಸಂಗತಿ.
ಸ್ಥಳೀಯ ಸುದ್ದಿಗಳಿಗೆ ಪ್ರಾಮುಖ್ಯತೆ ನೀಡಿರುವುದು ಗಮನಾರ್ಹ. ಜರ್ಮನಿಯ ಸೈಕಲ ಸವಾರಿಯಂತಹ ಲೇಖನಗಳು ಪರಿಸರ ಪ್ರೀತಿಯನ್ನು ಹೆಚ್ಚಿಸುತ್ತವೆ.
ಧನ್ಯವಾದಗಳು