ನವದೆಹಲಿ : ಪರೀಕ್ಷೆಗಳನ್ನ ವಿದ್ಯಾರ್ಥಿಗಳು ಭಯವಿಲ್ಲದೇ ಎದುರಿಸೋಕೆ ಆತ್ಮವಿಶ್ವಾಸ ಅತ್ಯಗತ್ಯ. ವಿದ್ಯಾರ್ಥಿಗಳಿಗೆ ನೈತಿಕ ಸ್ಥೈರ್ಯವನ್ನ ತುಂಬೋ ಪ್ರಧಾನಿ ನರೇಂದ್ರ ಮೋದಿ ಕನಸಿನ ಯೋಜನೆ ಪರೀಕ್ಷಾ ಪೇ ಚರ್ಚಾ ದ 3ನೇ ಆವೃತ್ತಿಯ ಸಂವಾದ ಇಂದು 11 ಗಂಟೆಗೆ ದೆಹಲಿಯ ತಾಲ್ಕತೋರ ಸ್ಟೇಡಿಯಂನಲ್ಲಿ ನಡೆಯಲಿದೆ.
ಸಂವಾದದಲ್ಲಿ ಸುಮಾರು 2000 ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪಾಲಕರು ಪಾಲ್ಗೊಳ್ಳಲಿದ್ದು ರಾಜ್ಯದಿಂದ ಸುಮಾರು 45 ವಿದ್ಯಾರ್ಥಿಗಳು ದೆಹಲಿಗೆ ತೆರಳಿದ್ದಾರೆ. ಈಗಾಗಲೇ ಚರ್ಚೆಯ 2 ಸಂವಾದಗಳು ಪರೀಕ್ಷೆಯ ಸಮಯದಲ್ಲಿ ನಡೆದಿದ್ದು, ಪರೀಕ್ಷಾ ಸಂದರ್ಭಗಳಲ್ಲಿ ಮಕ್ಕಳಲ್ಲಿ ಮನೆಮಾಡೋ ಭಯವನ್ನ ನಿವಾರಿಸಿ ಮಕ್ಕಳಲ್ಲಿ ಮನೋಸ್ಥೈರ್ಯವನ್ನ ಮೂಡುವಂತೆ ಪ್ರಯತ್ನ ನಡೆಸಲಾಗುತ್ತಿದೆ. ಅಲ್ಲದೇ ದೇಶದ ಪ್ರಧಾನಿಯೇ ಖುದ್ದು ಸಂವಾದದಲ್ಲಿ ಪಾಲ್ಗೊಳ್ಳುವುದರಿಂದ ಮಕ್ಕಳೂ ಕೂಡ ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ.