ಆದ್ಯೋತ್ ಸುದ್ದಿನಿಧಿ:
ಬೆಳೆದು ನಿಂತಿರುವ ಅನಾನಸ್ ಹಣ್ಣಿಗೆ ಸರಕಾರ
ಮಾರುಕಟ್ಟೆ ಮಾಡಿಕೊಡದಿದ್ದರೆ ಅನಾನಸ್ ಬೆಳೆದಿರುವ ರೈತ ಬೀದಿಗೆ ಬೀಳಲಿದ್ದಾನೆ.
ಅಪ್ಪಟ ಉಷ್ಣವಲಯದ ಹಣ್ಣಾಗಿರುವ ಅನಾನಸ್ ರಾಜ್ಯದ ಶಿವಮೊಗ್ಗ,ಉತ್ತರಕನ್ನಡ ಜಿಲ್ಲೆಗಳಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುತ್ತಾರೆ.
ಕಡು ಬೇಸಿಗೆಯಲ್ಲಿ ಕೊಯ್ಲಿಗೆ ಬರುವ ಈ ಹಣ್ಣಿಗೆ ದಿಲ್ಲಿ ಸೇರಿದಂತೆ ಉತ್ತರಭಾರತದಲ್ಲಿ ಬಹಳ ಬೇಡಿಕೆ ಇದೆ.
ಅನಾನಸ್ ಹಣ್ಣಿನಿಂದ,ಜ್ಯೂಸ್,ಜ್ಯಾಮ್ ತಯಾರಿಸುವರಲ್ಲದೆ ಮದುವೆ,ಹುಟ್ಟು ಹಬ್ಬದಂತಹ ಮಂಗಲಕಾರ್ಯಗಳ ಜೊತೆಗೆ ಪಾರ್ಟಿಗಳಲ್ಲಿ ತಿನ್ನಲೂ ಬಳಸುತ್ತಾರೆ.
ಶಕ್ತಿವರ್ಧಕ ಹಾಗೂ ಉಲ್ಲಾಸವನ್ನುಂಟು ಮಾಡುವ ಈ ಹಣ್ಣಿನಲ್ಲಿ ಪೊಟ್ಯಾಷಿಯಂ ಅಂಶ ಹೇರಳವಾಗಿದೆ.
ಆನೆಕಾಲು,ಮೂತ್ರಕೋಶದತೊಂದರೆ,ಕಜ್ಜಿ,ಕಾಮಲೆ,ಗನೋರಿಯಾ,ಗಂಟಲುರೋಗಗಳಿಗೆ ಅನಾನಸ್ ಹಣ್ಣು ಔಷಧವೂ ಹೌದು.
ಬೇಸಿಗೆಯಲ್ಲಿ ಬರುವ ಮಾವಿನಹಣ್ಣಿಗೆ ಸ್ಪರ್ಧೆ ನೀಡುವ ಏಕೈಕ ಹಣ್ಣು ಅನಾನಸ್ ಆಗಿದ್ದು ಮಾವಿನಹಣ್ಣಿನ ಬೆಳೆ ಕಡಿಮೆ ಬಂದಾಗ ಬಂಪರ್ ಬೆಲೆಯನ್ನೂ ಪಡೆಯುತ್ತದೆ.
ಈ ಬಾರಿ ಮಾವಿನಹಣ್ಣಿನ ಬೆಳೆ ಕಡಿಮೆಯಾಗಿದೆ ಆದರೆ ಅನಾನಸ್ ಗೆ ಬೆಲೆ ಮಾತ್ರ ಇಲ್ಲ ಕಾರಣ ಕೊವಿಡ್19
ಕೆ.ಜಿ.ಗೆ 10-15ರೂ. ಬೆಲೆ ಇರಬೇಕಾದ ಸಮಯದಲ್ಲಿ ಕೇವಲ ಕೆ.ಜಿ.ಗೆ 5-6ರೂ.ಬೆಲೆ ಮಾತ್ರ ಸಿಗುತ್ತಿದೆ ಅದೂ ಕೊಯ್ಲು ನಡೆಸಿ ಫ್ಯಾಕ್ಟರಿ ಬಾಗಿಲಿಗೆ ಒಯ್ದರೆ ಮಾತ್ರಾ ಖರೀದಿ ಮಾಡುತ್ತಾರೆ.
ಕನಿಷ್ಠ 10ರೂ.ದೊರೆತರೆ ಮಾಡಿದ ಖರ್ಚನ್ನು ರೈತ ವಾಪಸ್ಸ ಪಡೆದಾನು.
ಅನಾನಸ್ ಮುಖ್ಯ ಮಾರುಕಟ್ಟೆ ಇರುವುದು ಉತ್ತರಭಾರತದಲ್ಲಿ
ಈ ಭಾಗದಿಂದ ಉತ್ತರಭಾರತಕ್ಕೆ ಸಾಗಿಸುವುದೇ ಕಷ್ಟವಾಗಿದೆ
ಬನವಾಸಿ,ಸಿದ್ದಾಪುರ,ಸೊರಬಾ ಭಾಗದಲ್ಲಿ ಅನಾನಸ್ ಹಣ್ಣನ್ನು ಸಂಸ್ಕರಿಸುವ ಪ್ಯಾಕ್ಟರಿಗಳಿವೆ.
ಸಂಸ್ಕರಣಗೊಂಡ ಅನಾನಸ್ ಮಾರುಕಟ್ಟೆಗೆ ಹೋಗಿ ಅಲ್ಲಿಂದ ಹಣ ಬಂದರೆ ಇಲ್ಲಿಯ ಬೆಳೆಗೆ ಒಂದಿಷ್ಟು ಬೆಲೆ ಬರಬಹುದು ಎನ್ನುತ್ತಾರೆ ಸಿದ್ದಾಪುರದ ಫ್ಯಾಕ್ಟರಿಯ ಮಾಲಿಕ ವಿಜಯ ಪ್ರಭು.
ಸುಮಾರು 7ಲಕ್ಷರೂ.ಖರ್ಚು ಮಾಡಿ ಎರಡು ಎಕರೆ ಪ್ರದೇಶದಲ್ಲಿ ಅನಾನಸ್ ಬೆಳೆದಿದ್ದೇನೆ ಉತ್ತಮ ಬೆಲೆ ಬಂದರೆ ಒಂದಿಷ್ಟು ಲಾಭ ಮಾಡಬಹುದು ಆದರೆ ಕೊರೊನಾ ಕಾರಣದಿಂದ ಉತ್ತಮ ಬೆಳೆ ಇದ್ದರೂ ಕೊಳ್ಳುವವರು ಇಲ್ಲದೆ ಬೆಳೆ ಹಾಳಾಗುತ್ತಿದೆ ಸರಕಾರ ನಡೆಸುವವರು ಹಣ್ಣನ್ನು ಖರೀದಿ ಮಾಡುತ್ತೇವೆ ಎಂದು ಹೇಳುತ್ತಾರೆ ಆದರೆ ಇವೆಲ್ಲ ಹೇಳಿಕೆಗೆ ಸೀಮಿತವಾಗಿದ್ದು ಯಾವ ಖರೀದಿದಾರನೂ ಬಂದಿಲ್ಲ ಎನ್ನುತ್ತಾರೆ ಕಣಸೆಯ ರಾಘವೇಂದ್ರ ನಾಯ್ಕ
ಯಡಿಯೂರಪ್ಪನವರೇನೋ ರೈತರ ಬಗ್ಗೆ,ಅವರಿಗೆ ನೀಡುವ ಸೌಲಭ್ಯದ ಬಗ್ಗೆ ಪ್ರಾಮಾಣಿಕ ಖಾಳಜಿ ವ್ಯಕ್ತಪಡಿಸುತ್ತಾರೆ ಆದರೆ ಅವರ ಸಹೋದ್ಯೋಗಿ ಮಂತ್ರಿಗಳು,ಕೈಕೆಳಗಿನ ಅಧಿಕಾರಿಗಳು ಅದೇ ಪ್ರಾಮಾಣಿಕತೆ ಪ್ರದರ್ಶಿಸಿದರೆ ರೈತರ ಬದುಕು ಹಸನಾಗಲು ಸಾಧ್ಯ.
