ಆದ್ಯೋತ್ ನ್ಯೂಸ್ ಡೆಸ್ಕ್ : ಕೋವಿಡ್ 19 ತಡೆಗೆ ಉತ್ತರ ಕನ್ನಡ ಜಿಲ್ಲಾಡಳಿತ ವಿಶೇಷ ಕ್ರಮಗಳನ್ನ ಕೈಗೊಳ್ಳೋ ಮೂಲಕ ಕೊರೊನಾ ತಡೆಯುವ ಪ್ರಯತ್ನಗಳನ್ನ ಮುಂದುವರೆಸಿದೆ. ಜಿಲ್ಲೆಗೆ ಬರುವವರಿಗೆ ಕಂಡೀಷನ್ ಗಳನ್ನ ಹಾಕಲಾಗುತ್ತಿದೆ.
ಜಿಲ್ಲೆಯ ಭಟ್ಕಳದಲ್ಲಿ 9 ಪಾಸಿಟಿವ್ ಕೇಸ್ ಗಳು ಇರುವ ಕಾರಣ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಗಳನ್ನ ಕೈಗೊಳ್ಳಲು ಮುಂದಾಗಿದೆ. ಈ ಬಾರಿ ಜಿಲ್ಲೆಗೆ ಬಂದ್ರೆ ಹೋಮ್ ಕ್ವಾರಂಟೈನ್ ಕಡ್ಡಾಯವಾಗಿರಲಿದೆ. ಇಷ್ಟೊಂದು ಕಟ್ಟುನಿಟ್ಟುಗಳ ನಡುವೆಯೂ ಗೇಟ್ ಗಳನ್ನ ತಪ್ಪಿಸಿ ಹಲವರು ಬೇರೆ ಬೇರೆ ಕಡೆ ಸಂಚಾರ ನಡೆಸುತ್ತಿದ್ದರು. ಇದನ್ನು ತಡೆಯುವ ಸಲುವಾಗಿ ಹೊರ ರಾಜ್ಯ ಅಥವಾ ಹೊರ ಜಿಲ್ಲೆಗಳಿಂದ ಬರುವವರಿಗೆ ಕ್ವಾರಂಟೈನ್ ಕಡ್ಡಾಯವಾಗಿದೆ. ಜಿಲ್ಲೆಯನ್ನು ಪ್ರವೇಶಿಸುವವರು ಕಡ್ಡಾಯವಾಗಿ ಫೀವರ್ ಸೆಂಟರ್ ನಲ್ಲಿ ತಪಾಸಣೆಗೆ ಒಳಗಾಗಬೇಕು. ನಂತರ ಕ್ವಾರಂಟೈನ್ ಸೀಲ್ ಹಾಕಿ 14 ದಿನದ ಹೋಮ್ ಕ್ವಾರಂಟೈನ್ ಗೆ ಕಳಿಸಲಾಗುತ್ತೆ. ಹೋಮ್ ಕ್ವಾರಂಟೈನ್ ಗೆ ವ್ಯಕ್ತಿ ಒಪ್ಪದಿದ್ದಲ್ಲಿ ಕಡ್ಡಾಯವಾಗಿ ಸರ್ಕಾರಿ ಕ್ವಾರಂಟೈನ್ ಗೆ ಹಾಕಲಾಗುವುದು ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.