ಅದ್ಯೋತ್ ಸುದ್ದಿ ನಿಧಿ : ಸಂತರು ಭಾರತದ ಆತ್ಮ. ಸಂತರ ಮೇಲಿನ ಆಕ್ರಮಣ ಭಾರತದ ಮೇಲಿನ ಆಕ್ರಮಣ. ಸಂತರ ಹತ್ಯೆ, ಭಾರತದ ಹತ್ಯೆ. ಮಹಾರಾಷ್ಟ್ರದ ಫಾಲ್ಗರ್ ನಲ್ಲಿ ನಡೆದ ವಧೆ ಖಂಡನೀಯ ಅಂತ ರಾಮಚಂದ್ರಾಪುರಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದ್ದಾರೆ.
ಜಿಲ್ಲೆಯ ಗೋಕರ್ಣದಲ್ಲಿ ಮಾತನಾಡಿದ ಶ್ರೀಗಳು, ಇದೊಂದು ಕಂಡು ಕೇಳರಿಯದ ಭೀಭತ್ಸ ಹತ್ಯೆ. ಮನುಷ್ಯ ಕ್ರೂರ ಮೃಗ ಅಥವಾ ಪಿಶಾಚಿಯೂ ಅಗಬಹುದು ಅನ್ನೋದಕ್ಕೆ ನಿದರ್ಶನ ಈ ಘಟನೆ. ಈ ಹತ್ಯೆಯನ್ನು ದೇಶ ಖಂಡಿಸಬೇಕಿತ್ತು. ನಮ್ಮ ದೇಶ ಎಚ್ಛೆತ್ತಿದೆ ಅಂತ ಕಾಣುತ್ತಿಲ್ಲ. ದೇಶ ಮೈ ಮರೆತು ಮಲಗಿದೆ. ವ್ಯವಸ್ಥೆ ನೆಪಗಳನ್ನು ಹೇಳೋದ್ರಲ್ಲಿ, ಅವರಿವರ ರಕ್ಷಣೆಯಲ್ಲಿ ನಿರತವಾಗಿದೆ. ಈಗ ನಾವು ಎಚ್ಚೆತ್ತುಕೊಳ್ಳದಿದ್ರೆ ಮುಂದೆ ಎಚ್ಚೆತ್ತುಕೊಂಡ್ರು ಪ್ರಯೋಜನ ಇರುವುದಿಲ್ಲ. ಸನ್ಯಾಸಿಗಳು ಯಾರೋ ದಾರಿಹೋಕರಲ್ಲ. ಶತಕೋಟಿ ಹಿಂದುಗಳ ಪ್ರತಿನಿಧಿಗಳು. ದೆಹಲಿ ನಡುಗಿ, ಮಹಾರಾಷ್ಟ್ರ ಕಂಪಿತವಾಗುವಂತೆ ಧ್ವನಿ ಎತ್ತಿ ಅನ್ನೋದು ದೇಶವಾಸಿಗಳಿಗೆ ಹಾಗೂ ಇನ್ನೊಮ್ಮೆ ಇಂತಹ ಘಟನೆ ಜರುಗದಂತೆ ಉಗ್ರ ಕ್ರಮವನ್ನ ಕೈಗೊಳ್ಳಿ ಅನ್ನೋದು ವ್ಯವಸ್ಥೆಗೆ ಹಾಗೂ ಕೇಂದ್ರ ಸರ್ಕಾರಕ್ಕೆ ನಮ್ಮ ಆಗ್ರಹವಾಗಿದೆ ಎಂದರು.