ಆದ್ಯೋತ್ ಸುದ್ದಿ ನಿಧಿ : ಬಿಹಾರ, ಜಾರ್ಖಂಡ್ ನ ರಾಜ್ಯಪಾಲರಾಗಿದ್ದ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ರಾಮಾ ಜೋಯಿಸ್ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮಂಡಗದ್ದೆ ರಾಮಾ ಜೋಯಿಸ್ ಅಂತಾನೇ ಪ್ರಖ್ಯಾತಿ ಪಡೆದಿದ್ದ ರಾಮಾ ಜೋಯಿಸ್ ಶಿವಮೊಗ್ಗದ ಅರಗದಲ್ಲಿ ಜನಿಸಿದ್ದರು. ಬೆಂಗಳೂರಿನಲ್ಲಿ ವಾಸವಾಗಿದ್ದ ರಾಮ ಜೋಯಿಸ್ ಎಲ್.ಎಲ್.ಬಿ ಪದವಿ ಪಡೆದು ಪ್ರಖ್ಯಾತ ನ್ಯಾಯವಾದಿಯಾಗಿ ಸೇವೆ ಸಲ್ಲಿಸಿದ್ದರು. ನಂತರ ಪಂಜಾಬ್ ಹಾಗೂ ಹರ್ಯಾಣ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿ ನಿವೃತ್ತಿ ಹೊಂದಿದ್ದರು. ರಾಜ್ಯಸಭಾ ಸದಸ್ಯರಾಗಿ ಕೂಡ ಕಾರ್ಯನಿರ್ವಹಿಸಿದ್ದರು. ಆರ್.ಎಸ್.ಎಸ್ ನ ಪ್ರಖರ ವಾಗ್ಮಿಗಳಾಗಿದ್ದ ಇವರು ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ಬಿಹಾರ ಹಾಗೂ ಜಾರ್ಖಂಡ್ ನ ರಾಜ್ಯಪಾಲರಾಗಿ ಸೇವೆ ನಿರ್ವಹಿಸಿದ್ದರು. 89 ವರ್ಷ ವಯಸ್ಸಿನ ರಾಮಾ ಜೋಯಿಸ್ ಇಂದು ಮುಂಜಾನೆ 7.30ಕ್ಕೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೃತರು ಪತ್ನಿ ಹಾಗೂ ಓರ್ವ ಮಗ, ಮಗಳನ್ನು ಅಗಲಿದ್ದಾರೆ.
###
ಪಂಜಾಬ್ ಹೈಕೋರ್ಟ್ ಮುಖ್ಯ ನ್ಯಾಯಾಧೀಶರೂ, ಬಿಹಾರ್ ರಾಜ್ಯದ ರಾಜ್ಯಪಾಲರು, ರಾಜ್ಯಸಭೆಯ ಸದಸ್ಯರೂ, ಕಾನೂನು ತಜ್ಞರು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಸ್ವಯಂ ಸೇವಕರಾಗಿದ್ದ, ನ್ಯಾಯಧೀಶ ರಾಮಾಜೋಯೀಸ್ ನಿವಾಸಕ್ಕೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.