ಆದ್ಯೋತ್ ಸಿನಿ ಡೆಸ್ಕ್ : ಮುಂದಿನ ವಾರ ತೆರೆಗೆ ಅಪ್ಪಳಿಸುತ್ತಿರೋ ಕನ್ನಡ ಚಿತ್ರಗಳಲ್ಲಿ ಕುತೂಹಲ ಮೂಡಿಸಿರೋ ಚಿತ್ರ ‘ಶಿವಾಜಿ ಸುರತ್ಕಲ್’.
ರಮೇಶ್ ಅರವಿಂದ್ ಅವರ ಸಿನಿ ಬದುಕಿನಲ್ಲಿ ಹೊಸತನದ ಮತ್ತೊಂದು ತಿರುವನ್ನು ನೀಡುತ್ತೆ ಅಂತ ವಿಮರ್ಶಿಸಲಾಗುತ್ತಿರೋ ‘ಶಿವಾಜಿ ಸುರತ್ಕಲ್’ ಚಿತ್ರ ಫೆಬ್ರವರಿ 21 ಶಿವರಾತ್ರಿಯಂದು ಬೆಳ್ಳಿ ತೆರೆಗೆ ಅಪ್ಪಳಿಸಿ ಆರ್ಭಟಿಸೋಕೆ ರೆಡಿಯಾಗಿದೆ. ಕುತೂಹಲಕಾರಿ ಥ್ರಿಲ್ಲರ್ ಸಸ್ಪೆನ್ಸ್ ನೊಂದಿಗೆ ಮೂಡಿಬಂದಿರೋ ಈ ಪತ್ತೇದಾರಿ ಸಿನಿಮಾ ರಣಗಿರಿ ರಹಸ್ಯದ ಕುರಿತಾಗಿ ಎಳೆ ಎಳೆಯಾಗಿ ಬಿಚ್ಚಿಡುತ್ತಿದೆ. ರಣಗಿರಿಯನ್ನೇ ಮುಖ್ಯ ಕಥಾಹಂದರವಾಗಿಸಿ ಅಲ್ಲಿ ನಡೆಯೋ ಒಂದು ಕೊಲೆಯ ಸುತ್ತ ನಡೆಯುವ ರಹಸ್ಯಗಳನ್ನ ಒಂದೊಂದಾಗಿ ಬಿಚ್ಚಿಡೋ ಅದ್ಭುತ ಪ್ರಯತ್ನವನ್ನ ಚಿತ್ರತಂಡ ರಮೇಶ್ ಅರವಿಂದ್ ಅನ್ನೋ ಎವರ್ ಯಂಗ್ ಕಲಾಸಾಧಕನ ಮೂಲಕ ಮಾಡಿಸಿದೆ. ರಮೇಶ್ ಅರವಿಂದ್ ಈ ಚಿತ್ರಕ್ಕಾಗಿ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದು, ಹಗಲು ರಾತ್ರಿ ಎನ್ನದೇ ಚಿತ್ರಕ್ಕಾಗಿ ದುಡಿದಿದ್ದು, ಉತ್ತಮ ಚಿತ್ರವಾಗಿ ಮೂಡಿಬಂದಿರೋದ್ರಲ್ಲಿ ಅನುಮಾನವಿಲ್ಲ ಅಂತಾರೆ ಚಿತ್ರದ ನಿರ್ದೇಶಕರು.
ಚಿತ್ರದ ಟ್ರೇಲರ್ ಇಲ್ಲಿದೆ ನೋಡಿ –
ಇನ್ನು ಚಿತ್ರಕ್ಕೆ ಆಕಾಶ್ ಶ್ರೀವತ್ಸ ನಿರ್ದೇಶನವಿದ್ದು, ರೇಖಾ ಕೆ.ಎನ್ ಹಾಗೂ ಅನೂಪ್ ಗೌಡ ಅಂಜನಾದ್ರಿ ಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿ ನಿರ್ಮಿಸಿದ್ದಾರೆ. ಮುಖ್ಯ ತಾರಾಗಣದಲ್ಲಿ ರಮೇಶ್ ಅರವಿಂದ್, ರಾಧಿಕಾ ನಾರಾಯಣ್, ಆರೋಹಿ ನಾರಾಯಣ್, ಅವಿನಾಶ್, ರಮೇಶ್ ಪಂಡಿತ್ ಮುಂತಾದವರು ನಟಿಸಿದ್ದಾರೆ.