ಸಾಗರ : ಜಿಲ್ಲೆಯ ಪ್ರಸಿದ್ಧ ಜಾತ್ರೆಯಾದ ಸಾಗರ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆ ಇಂದಿನಿಂದ ಪ್ರಾರಂಭವಾಗಿದ್ದು, ಫೆಬ್ರವರಿ 26ರ ವರೆಗೆ ಜರುಗಲಿದೆ.
ಇಂದು ಬೆಳಿಗ್ಗೆ ಜಾತ್ರಾ ಆವಾರದ ಗದ್ದುಗೆಗೆ ದೇವಿಯ ಮೂರ್ತಿಯನ್ನ ತಂದು ಪ್ರತಿಸ್ಥಾಪಿಸುವುದರೊಂದಿಗೆ ಜಾತ್ರೆಯ ವಿಧಿ ವಿಧಾನಗಳು ಪ್ರಾರಂಭವಾಗಿವೆ. ಬೆಳಗಿನ ಜಾವದಿಂದಲೇ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿ ಗದ್ದುಗೆಗೆ ಬರುವ ದೃಶ್ಯವನ್ನ ಕಣ್ತುಂಬಿಕೊಂಡರು. ಬುಧವಾರದಿಂದ ಮುಂದಿನ ಬುಧವಾರದವರೆಗೆ ಉಡಿ ತುಂಬುವ ಸೇವೆ, ಚಾವಟಿ ಸೇವೆ ಹಾಗೂ ಹಣ್ಣು ಕಾಯಿಗಳನ್ನು ದೇವಿಗೆ ಅರ್ಪಿಸುವ ಸೇವೆಗಳು ನಡೆಯಲಿದ್ದು, ಫೆಬ್ರವರಿ 21 ರಿಂದ 23ರ ವರೆಗೆ ಸಾಗರದ ನೆಹರೂ ಮೈದಾನದಲ್ಲಿ ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿ ನಡೆಯಲಿದೆ. ಈಗಾಗಲೇ ಮನೋರಂಜನಾ ಆಟಿಕೆಗಳು ಠಿಕಾಣಿ ಹೂಡಿದ್ದು ಮುಂದಿನ ಸುಮಾರು 15 ದಿನಗಳವರೆಗೆ ಬರುವ ಭಕ್ತಾದಿಗಳನ್ನು ರಂಜಿಸಲಿದೆ. ಫೆಬ್ರವರಿ 26 ರಂದು ರಾತ್ರಿ 10 ಗಂಟೆಗೆ ದೇವಿಯ ಗದ್ದುಗೆ ನಿರ್ಗಮನದೊಂದಿಗೆ ವಿದ್ಯುಕ್ತ ಜಾತ್ರೆಗೆ ತೆರೆ ಬೀಳಲಿದೆ.
,👍👍