ಅನಧಿಕೃತ ಶ್ರೀಗಂಧ ಕಳ್ಳಸಾಗಣೆ: ಆರೋಪಿ ವಶ

ಆದ್ಯೋತ್ ಸುದ್ದಿ ನಿಧಿ : ಶ್ರೀಗಂಧ ಕಳ್ಳಸಾಗಣೆ ಮಾಡುತ್ತಿದ್ದ ಖದೀಮನನ್ನು ವಶಕ್ಕೆ ಪಡೆದ ಘಟನೆ ಸಿದ್ದಾಪುರದ ಕಾನಗೋಡು ಸಮೀಪದ ಅರಣ್ಯದಲ್ಲಿ ನಡೆದಿದೆ.

ಅನಧಿಕೃತವಾಗಿ ಮರವನ್ನು ತುಂಡು ಹಾಗೂ ಚಕ್ಕೆ ಮಾಡಿ ಸಾಗಿಸುವಾಗ ತಾಳಗುಪ್ಪ ಮೂಲದ ಹೊಂಕೇರಿಯ ಈರಪ್ಪ ನಾಯ್ಕ(52) ಅರಣ್ಯಾಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ. 40 ಕೆಜಿ ತೂಕದ ಸುಮಾರು ಎರಡೂವರೆ ಲಕ್ಷ ಮೌಲ್ಯದ ಶ್ರೀಗಂಧವನ್ನು ಸಿದ್ದಾಪುರ ಉಪವಿಭಾಗ ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಶಿರಸಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಜಿ ಹೆಗಡೆ ಹಾಗೂ ಸಿದ್ದಾಪುರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಬ್ದುಲ್ ಅಜೀಜ್ ಮಾರ್ಗದರ್ಶನದಲ್ಲಿ ಸಿದ್ದಾಪುರ ಆರ್.ಎಫ್.ಓ ಶಿವಾನಂದ ನಿಂಗಾಣಿ, ಡಿ.ಆರ್.ಎಫ್.ಓ ಮಂಜುನಾಥ್, ಆನಂದ ಶೇಟ್, ಈಶ್ವರ್ ನಾಯ್ಕ, ಆನಂದ್ ನಾಯ್ಕ ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.

About the author

Adyot

Leave a Comment