ಆದ್ಯೋತ ನ್ಯೂಸ್: ಸಿದ್ದಾಪುರ ತಾಲೂಕಿನ ಹಲಗೇರಿ ಸಮೀಪದ ಕುಂಬಾರಕುಳಿ ಎಂಬಲ್ಲಿ ಪ್ರಯಾಣಿಕರ ಅಟೋ ಪಲ್ಟಿಯಾಗಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು ಆರು ಜನರು ಗಾಯಗೊಂಡಿದ್ದಾರೆ.
ಸಿದ್ದಾಪುರದಿಂದ ಹಲಗೇರಿಗೆ ಪ್ರಯಾಣಿಕರನ್ನು ಸಾಗಿಸುತ್ತಿದ್ದ ಅಟೋ, ಅಡ್ಡ ಬಂದ ಆಕಳನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿಪಕ್ಕದ ಗದ್ದೆಗೆ ಉರುಳಿದ ಪರಿಣಾಮ ರಾಮಚಂದ್ರ ಮಹಾಬಲೇಶ್ವರ ಹೆಗಡೆ(65) ಎನ್ನುವವರು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಚಾಲಕ ನರಸಿಂಹ ಮಡಿವಾಳ ಸೇರಿದಂತೆ ಉಳಿದ ಐದು ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
😲😦
With thanks for sharing your neat websites.