ಸಿದ್ದಾಪುರ : ಭಾರತಿ ಹೆಗಡೆಯವರ ‘ಸೀತಾಳೆ ದಂಡೆಯ ಸದ್ದಿಲ್ಲದ ಕತೆಗಳು’ ಪುಸ್ತಕದ ಲೋಕಾರ್ಪಣಾ ಕಾರ್ಯಕ್ರಮ ಸಿದ್ದಾಪುರದ ಶಂಕರಮಠದಲ್ಲಿ ನಡೆಯಿತು.
ಹಿರಿಯ ಸಾಹಿತಿ ನಾ.ಡಿಸೋಜಾ ಕೃತಿಯನ್ನು ಲೋಕಾರ್ಪಣೆ ಗೊಳಿಸಿ ಮಾತನಾಡಿ, ಪುಸ್ತಕ ಬಿಡುಗಡೆ ಎನ್ನುವುದಕ್ಕಿಂತ ಲೋಕಾರ್ಪಣೆ ಎನ್ನುವುದು ಸೂಕ್ತವಾದುದು. ‘ಸೀತಾಳೆ ದಂಡೆಯ ಸದ್ದಿಲ್ಲದ ಕತೆಗಳು’ ಒಂದು ಉತ್ತಮ ಕೃತಿಯಾಗಿದೆ. ವಿಲಕ್ಷಣ ಪಾತ್ರಗಳನ್ನೊಳಗೊಂಡ ನೈಜತೆಗೆ ಹತ್ತಿರವಾದ ಕತೆಗಳನ್ನು ಒಳಗೊಂಡಿದೆ ಎಂದರು.
ಹಿರಿಯ ವಿಮರ್ಶಕ ಆರ್.ಡಿ ಹೆಗಡೆ ಆಲ್ಮನೆ ಮಾತನಾಡಿ, ಕತೆಯು ಬೆರಗಿನಿಂದ ಕೂಡಿರಬೇಕು, ಬೆರಗು ಹುಟ್ಟಿಸದಿದ್ದರೆ ಕತೆ ಸಾಯುತ್ತದೆ. ಸೀತಾಳೆ ದಂಡೆಯ ಸದ್ದಿಲ್ಲದ ಕತೆಗಳಲ್ಲಿನ ಪ್ರಮುಖ ಪಾತ್ರಗಳು ಮಹಿಳೆಯಾಗಿರುವುದು ವಿಶೇಷವಾಗಿದೆ ಎಂದರು. ಕಾರ್ಯಕ್ರಮದಲ್ಲಿ ವಿಜಯ ಹೆಗಡೆ ದೊಡ್ಮನೆ, ಹಿರಿಯ ಪತ್ರಕರ್ತೆ ಡಾ.ಪೂರ್ಣಿಮಾ ಉಪಸ್ಥಿತರಿದ್ದರು.
ಚೆನ್ನಾಗಿದೆ ಕಾರ್ಯಕ್ರಮ ಕೂಡ. ಅಭಿನಂದನೆಗಳು
ಕಥಾಲೋಕಕ್ಕೆ ಮತ್ತಿಂದು ಗರಿ