ಸಿದ್ದಾಪುರ: ಸ್ಪೀಕರ್ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಎಂದು ಜಿಪಂ ಸದಸ್ಯರು ಮನವಿ ಕೊಟ್ಟಿರುವುದು ಸರಿಯಾದ ಕ್ರಮವೇ? ಇಂತಹ ಮನವಿಯನ್ನು ತಿರಸ್ಕರಿಸದೆ ಸ್ವೀಕರಿಸಿರುವ ತಹಸಿಲ್ದಾರ ಕ್ರಮ ತಪ್ಪೆ? ಹೀಗೊಂದು ಸ್ವಾರಸ್ಯಕರ ಚರ್ಚೆ ಶುಕ್ರವಾರ ನಡೆದ ಸಿದ್ದಾಪುರ ತಾಲೂಕಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಡೆಯಿತು.
ಕಳೆದ ಎರಡು ದಿನದ ಹಿಂದೆ ಜಿಲ್ಲಾ ಪಂಚಾಯತ್ ಸದಸ್ಯರೊಬ್ಬರು ತಾಲೂಕಿನ ಅಧಿಕಾರಿಗಳು ಶಿಷ್ಟಾಚಾರದ ಪ್ರಕಾರ ನಡೆದುಕೊಳ್ಳುತ್ತಿಲ್ಲ. ಸರಕಾರಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಹೆಸರು ಹಾಕುವುದಿಲ್ಲ, ದೂರವಾಣಿ ಕರೆಯನ್ನೂ ಮಾಡುವುದಿಲ್ಲ. ಸ್ಪೀಕರ್ ದಿಢೀರ್ ಕಾರ್ಯಕ್ರಮ ಆಯೋಜಿಸುತ್ತಾರೆ. ಇವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಿ ಎಂದು ತಹಸೀಲ್ದಾರರಿಗೆ ಮನವಿ ಸಲ್ಲಿಸಿದ್ದರಂತೆ. ಈ ಸಂಬಂಧ ತಾಲೂಕಿನ ಅಧಿಕಾರಿಗಳು ಶಿಷ್ಟಾಚಾರದ ಪ್ರಕಾರ ನಡೆದುಕೊಳ್ಳುತ್ತಿಲ್ಲ. ಜನಪ್ರತಿನಿಧಿಗಳನ್ನು ಕಡೆಗಣಿಸುತ್ತಿದ್ದಾರೆ. ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಹಾಕುವುದಿಲ್ಲ. ದೂರವಾಣಿಯ ಮೂಲಕವಾದರೂ ತಿಳಿಸುವುದಿಲ್ಲ. ಇದು ಸರಿಯಾದ ಕ್ರಮವಲ್ಲ ಎಂದು ತಾಲೂಕಾ ಪಂಚಾಯತ್ ಸದಸ್ಯ ನಾಸೀರ್ ವಲ್ಲಿಖಾನ್ ಆರೋಪಿಸಿದರು.
ಸ್ಪಿಕರ್ ವಿರುದ್ದ ಜಿಲ್ಲಾ ಪಂಚಾಯತ್ ಸದಸ್ಯರೊಬ್ಬರು ಶಿಷ್ಟಾಚಾರ ಪಾಲಿಸುತ್ತಿಲ್ಲ ಎಂದು ತಹಸೀಲ್ದಾರರಿಗೆ ದೂರು ಕೊಡುವುದು. ಕಾನೂನು ಪ್ರಕಾರ ತಪ್ಪು ತಹಸೀಲ್ದಾರರು ಇದನ್ನು ತಿರಸ್ಕರಿಸಬೇಕಿತ್ತು ಎಂದು ಸಿದ್ದಾಪುರ ತಾಲೂಕಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ತಾಲೂಕಾ ಪಂಚಾಯತ್ ಸ್ಥಾಯಿ ಸಮಿತಿ ಅದ್ಯಕ್ಷ ಮಹಾಬಲೇಶ್ವರ ಹೆಗಡೆ ಹೇಳಿದರು.
ಹಿಂದಿನ ಸರಕಾರದಲ್ಲಿ ಉಸ್ತುವಾರಿ ಸಚಿವರಾಗಿದ್ದವರು ಕಾರವಾರದಲ್ಲಿ ಶಿರಸಿಯಲ್ಲಿ ಉದ್ಘಾಟನೆ ಮಾಡುತ್ತಿದ್ದರು. ನಮ್ಮ ಶಾಸಕರು ಜನರ ನಡುವೆ ಕಾರ್ಯಕ್ರಮ ಮಾಡುತ್ತಿರುವುದು ಮೆಚ್ಚುವಂತಹದ್ದು. ಅಧಿಕಾರಿಗಳ ತಪ್ಪನ್ನು ಸ್ಪೀಕರ್ ಮೇಲೆ ಹಾಕುವುದು ತಪ್ಪು ಎಂದು ಮಹಾಬಲೇಶ್ವರ ಹೆಗಡೆ ಹೇಳಿದರು.