ಕಾಶ್ಮೀರಿ ಪಂಡಿತರ ನೋವಿನ ಕಥಾನಕ ‘ಶಿಕಾರಾ’ ಟ್ರೇಲರ್ ಬಿಡುಗಡೆ

ಕಾಶ್ಮೀರಿ ಪಂಡಿತರ ನೋವಿನ ಕಥೆಯನ್ನ ಹೇಳೋ ನೈಜ ಕಥಾನಕವುಳ್ಳ ಸಿನೇಮಾವೊಂದು ಬಿಡುಗಡೆಯಾಗುತ್ತಿದ್ದು, ಇದರ ಟ್ರೇಲರ್ ಬಿಡುಗಡೆಯಾಗಿದೆ.

ವಿಧು ವಿನೋದ್ ಚೋಪ್ರಾ ನಿರ್ದೇಶನವುಳ್ಳ ಶಿಕಾರಾ ಚಿತ್ರ ದಿ ಅನ್ ಟೋಲ್ಡ್ ಸ್ಟೋರಿ ಆಫ್ ಕಾಶ್ಮೀರಿ ಪಂಡಿತ್ಸ್ ಅನ್ನೋ ಟ್ಯಾಗ್ ಲೈನ್ ಹೊತ್ತು ಬರುತ್ತಿದ್ದು, ಟ್ರೇಲರ್ ನಲ್ಲಿರೋ ದೃಶ್ಯಗಳೇ ಪ್ರೇಕ್ಷಕರ ಮನ ಕಲಕುವಂತಿವೆ. 1990 ರಲ್ಲಿ ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರ ಮೇಲೆ ನಡೆದ ದೌರ್ಜನ್ಯ ಹಾಗೂ ಹತ್ಯೆಗಳ ಕುರಿತಾದ ಕಥಾನಕವನ್ನು ಚಿತ್ರ ಹೊಂದಿದ್ದು, ಫೆಬ್ರವರಿ 7 ರಂದು ಬಿಡುಗಡೆಯಾಗಲಿದೆ. ಚಿತ್ರದ ಟ್ರೇಲರ್ ಟ್ವಿಟ್ಟರ್ ಹಾಗೂ ಯೂಟ್ಯೂಬ್ ಗಳಲ್ಲಿ ಟಾಪ್ ಟ್ರೆಂಡಿಂಗ್ ನಲ್ಲಿದೆ.

About the author

Adyot

Leave a Comment