ಶಿರಸಿ : ಕರ್ನಾಟಕದ ಅತಿ ದೊಡ್ಡ ಜಾತ್ರೆಯಾದ ಶಿರಸಿ ಶ್ರೀ ಮಾರಿಕಾಂಬಾ ಜಾತ್ರೆ ಅತ್ಯಂತ ವಿಜೃಂಭಣೆಯಿಂದ ಜರುಗುತ್ತಿದೆ. ಅನೇಕ ಜನಪ್ರತಿನಿಧಿಗಳು, ಶಾಸಕರು, ಸಚಿವರು, ಸಂಸದರು ಸೇರಿದಂತೆ ಹಲವರು ದೇವಿಯ ದರ್ಶನ ಪಡೆಯುತ್ತಿದ್ದಾರೆ.
ಸೋಂದಾ ಸ್ವರ್ಣವಲ್ಲಿ ಮಠಾಧೀಶರಾದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಶಿರಸಿಗೆ ಅಗಮಿಸಿ ದೇವಿ ಮಾರಿಕಾಂಬೆಗೆ ಪೂಜೆ ಸಲ್ಲಿಸಿದರು. ದೇವಿಗೆ ಉಡಿ ಸೇರಿದಂತೆ ಸೀರೆ ಅರ್ಪಿಸಿದ ಶ್ರೀಗಳು ಕೊರೋನಾದಂತಹ ರೋಗಗಳು ವಾಸಿಯಾಗಿ ದೇಶ ಸುಭೀಕ್ಷವಾಗಿ ಮುನ್ನಡೆಯುವಂತಾಗಲಿ ಎಂದು ದೇವಿಯನ್ನು ಪ್ರಾರ್ಥಿಸಿದರು. ಗಮನಿಸಬೇಕಾದ ಅಂಶವೆಂದರೆ ತಾಯಿ ಮಾರಿಕಾಂಬೆಯು ಸರ್ವ ರೋಗಗಳನ್ನೂ ಪರಿಹರಿಸುವ ಶಕ್ತಿ ಹೊಂದಿದ್ದಾಳೆ ಎನ್ನುವ ಪ್ರತೀತಿ ಇದೆ.