ಆದ್ಯೋತ್ ಸುದ್ದಿ ನಿಧಿ : ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಮಹಾ ಅಭಿಯಾನದ – ಹೇರೂರು ತಾಲೂಕಿನ ಉದ್ಘಾಟನಾ ಕಾರ್ಯಕ್ರಮ ಶ್ರೀಮನ್ನೆಲೆಮಾವು ಮಠದ ಶಂಕರಕೃಪಾ ಸಭಾ ಭವನದಲ್ಲಿ ನಡೆಯಿತು.
ನಿಧಿ ಸಮರ್ಪಣಾ ಮಹಾ ಅಭಿಯಾನದ ಶಿರಸಿ ವಿಭಾಗದ ಪ್ರಮುಖರಾದ ದಿನೇಶ್ ಕುಮಾರ್ ಅಭಿಯಾನದ ಸಂಪೂರ್ಣ ಮಾಹಿತಿ ನೀಡಿದರು. ಜಿ ಎಂ ಹೆಗಡೆ ಹೆಗ್ನೂರು ಅಧ್ಯಕ್ಷತೆ ವಹಿಸಿದ್ದರು. ಶ್ರೀಮನ್ನೆಲೆಮಾವು ಮಠ ಮತ್ತು ಇಟ್ಳೋಣಿ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದ ವತಿಯಿಂದ ನಿಧಿ ಸಮರ್ಪಣೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಗಣೇಶ ಎನ್ ಹೇರೂರು ಕೂಡಾ ನಿಧಿ ಸಮರ್ಪಣೆ ಮಾಡಿದರು.
ಎಲ್ಲಾ ಮಂಡಲಗಳ ಮತ್ತು ಹೋಬಳಿಗಳ ಶ್ರೀರಾಮ ಸೇವಕರು ಭಾಗವಹಿಸಿ, ಅಭಿಯಾನದ ಮಾಹಿತಿಯನ್ನು ಪಡೆದರು. ಗುರುಪ್ರಸಾದ ಹೆಗಡೆ ಹರ್ತೆಬೈಲ್, ಹೇರೂರು ತಾಲೂಕಿನ ಅಭಿಯಾನದ ಪ್ರಮುಖ ಗೋಪಾಲ ಜೋಶಿ ಇಟ್ಳೋಣಿ, ಮಹಿಳಾ ಪ್ರಮುಖರಾದ ಸುಮನಾ ಹೆಗಡೆ, ರವಿ ಹಿರೇಹದ್ದ, ರಾಮಚಂದ್ರ ತಾರೇಸರ, ಗಣೇಶ ಐನಬೈಲ್ ಸೇರಿದಂತೆ ವಿವಿಧ ಜವಾಬ್ದಾರಿಗಳ ರಾಮ ಸೇವಕರು ಉಪಸ್ಥಿತರಿದ್ದರು.