ಆದ್ಯೋತ್ ನ್ಯೂಸ್ ಡೆಸ್ಕ್ : ದೇಶದೆಲ್ಲೆಡೆ ಕೊರೊನಾ ತನ್ನ ಪ್ರಕೋಪವನ್ನ ಮುಂದುವರೆಸಿದೆ. ಕೊರೊನಾ ಪರಿಹಾರ ನಿಧಿಗೆ ಎಲ್ಲ ಕಡೆಗಳಿಂದ ಸಹಾಯ ಹರಿದು ಬರುತ್ತಿದೆ. ಅದೇ ರೀತಿ ಶೃಂಗೇರಿ ಶ್ರೀ ಮಠದಿಂದ ಪ್ರಧಾನಿ ಪರಿಹಾರ ನಿಧಿಗೆ ಹಣವನ್ನ ನೀಡಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಶಾರದಾಂಬಾ ದೇವಾಲಯದ ಸಿಬ್ಬಂದಿ ಹಾಗೂ ಸಿ ಐ ಐ ಅರ್ ಸಿ ಸಿಬ್ಬಂದಿಯಿಂದ ಪರಿಹಾರ ನಿಧಿಗೆ 10 ಲಕ್ಷ ರೂಪಾಯಿ ಹಣವನ್ನ ನೀಡಲಾಗಿದ್ದು, ಶೃಂಗೇರಿ ತಾಲೂಕಿನಲ್ಲಿ ಶ್ರೀಮಠದಿಂದ ಊಟದ ವ್ಯವಸ್ಥೆ ಕೂಡ ಮಾಡಲಾಗಿದೆ. ಶಾರದಾಂಬಾ ದೇವಾಯದ ವಾಹನದಿಂದ ಊಟದ ವ್ಯವಸ್ಥೆ ಮಾಡಲಾಗಿದ್ದು ಈ ಕುರಿತು ಶೃಂಗೇರಿ ಜಗದ್ಗುರುಗಳ ಪೀಠದಿಂದ ಪ್ರಕಟಣೆಯನ್ನ ಹೊರಡಿಸಲಾಗಿದೆ.
🙏🙌🙏👌👍🙏