ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಪಟ್ಟಣಪಂಚಾಯತ್ ಹಾಗೂ ಭಟ್ಕಳ ತಾಲೂಕಿನ ಜಾಲಿ ಪಟ್ಟಣಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಸೋಮವಾರ ನಡೆದಿದೆ.
ಸಿದ್ದಾಪುರ ಪಪಂಗೆ ಅಧ್ಯಕ್ಷೆಯಾಗಿ ಬಿಜೆಪಿಯ
ಚಂದ್ರಕಲಾ ನಾಯ್ಕ ಉಪಾಧ್ಯಕ್ಷರಾಗಿ ರವಿಕುಮಾರ ನಾಯ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
15 ಸದಸ್ಯರ ಸಿದ್ದಾಪುರ ಪಪಂನಲ್ಲಿ 14 ಸದಸ್ಯರು ಬಿಜೆಪಿಯವರೇ ಆಗಿದ್ದರು. ಒಬ್ಬರು ಮಹಿಳಾ ಅಭ್ಯರ್ಥಿ ಮಾತ್ರ ಕಾಂಗ್ರೆಸ್ ಪಕ್ಷದವರಾಗಿದ್ದರು. ಅಧ್ಯಕ್ಷ ಹುದ್ದೆಗೆ ಹಿಂದುಳಿದ ವರ್ಗ(ಎ) ಮಹಿಳೆ ಬಂದಿದ್ದು ನಾಲ್ವರು ಅರ್ಹ ಅಭ್ಯರ್ಥಿಗಳು ಪಕ್ಷದಲ್ಲಿದ್ದರು.ಉಪಾಧ್ಯಕ್ಷ ಹುದ್ದೆ ಸಾಮಾನ್ಯ ಬಂದಿದ್ದರಿಂದ ಆಯ್ಕೆಯಾಗಿರುವ ಎಲ್ಲರೂ ಅರ್ಹರೆ ಆಗಿದ್ದರು. ಆದರೆ ಬಿಜೆಪಿಯ ಹಿರಿಯ ಮುಖಂಡರು ಸದಸ್ಯರ ಅಭಿಪ್ರಾಯವನ್ನು ಪಡೆದು ಅಂತಿಮವಾಗಿ ಚಂದ್ರಕಲಾ ನಾಯ್ಕ ಮತ್ತು ರವಿಕುಮಾರ ನಾಯ್ಕರನ್ನು ಆಯ್ಕೆ ಮಾಡಿದ್ದಾರೆ.
ತಹಸೀಲ್ದಾರ ಮಂಜುಳಾ ಭಜಂತ್ರಿ ಚುನಾವಣಾ ಪ್ರಕ್ರಿಯೆ ನಡೆಸಿದರು.
ಆಯ್ಕೆ ಪ್ರಕ್ರಿಯೆ ನಂತರ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷೆ ಚಂದ್ರಕಲಾ ನಾಯ್ಕ,ಎಲ್ಲಾ ಸದಸ್ಯರ ಸಹಕಾರದೊಂದಿಗೆ ಪಟ್ಟಣದ ಅಭಿವೃದ್ಧಿಯನ್ನು ಮಾಡುತ್ತೇವೆ ಎಂದು ಹೇಳಿದರು.
ಹಿರಿಯ ಸದಸ್ಯ ಕೆ.ಜಿ.ನಾಯ್ಕ ಹಣಜೀಬೈಲ್ ಮಾತನಾಡಿ, ಪಟ್ಟಣದ ಜನರು ನಮ್ಮ ಮೇಲೆ ವಿಶ್ವಾಸ ಇರಿಸಿ 15 ವಾರ್ಡನಲ್ಲಿ 14 ವಾರ್ಡ್‍ನಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲ್ಲುವಂತೆ ಮಾಡಿದ್ದಾರೆ ಜನರು ನಮ್ಮ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ನಮ್ಮ ಪಕ್ಷದಿದೆ ಅಲ್ಲದೆ ಉಸ್ತುವಾರಿ ಸಚೀವರು ನಮ್ಮ ಜಿಲ್ಲೆಯವರಾಗಿದ್ದಾರೆ ಈ ಎಲ್ಲರ ಸಹಕಾರದೊಂದಿಗೆ ಪಟ್ಟಣದ ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳಿದರು.
ಉಪಾಧ್ಯಕ್ಷ ರವಿಕುಮಾರ ನಾಯ್ಕ ಮಾತನಾಡಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಬಿಜೆಪಿ ಮಂಡಳ ಅಧ್ಯಕ್ಷ ನಾಗರಾಜ ನಾಯ್ಕ,ಪ್ರದಾನ ಕಾರ್ಯದರ್ಶಿ ಪ್ರಸನ್ನ ಹೆಗಡೆ ಮುಂತಾದವರು ಉಪಸ್ಥಿತರಿದ್ದರು.
*****
ಭಟ್ಕಳ ತಾಲೂಕಿನ ಜಾಲಿ ಪಟ್ಟಣಪಂಚಾಯತಗೆ ಸೋಮವಾರ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ತಂಜಿಂ ಬೆಂಬಲಿತ ಶಮೀಮ್ ಬಾನು ಮಹ್ಮದ್ ಹನೀಪ್ ಶೇಖ ಅಧ್ಯಕ್ಷರಾಗಿಯೂ,ಉಪಾಧ್ಯಕ್ಷರಾಗಿ ಫರ್ಹಾನ್ ಮಹಮ್ಮದ್ ಇರ್ಷಾದ್ ಇಕ್ಕೇರಿ ಆಯ್ಕೆಯಾಗಿದ್ದಾರೆ.
ಜಾಲಿ ಪಟ್ಟಣಪಂಚಾಯತ್ ಒಟ್ಟು 20 ಸದಸ್ಯರನ್ನು
ಹೊಂದಿದ್ದು ಅದರಲ್ಲಿ ಆರು ಸದಸ್ಯರು ಕಾಂಗ್ರೆಸ್ ಬೆಂಬಲದಿಂದ ಆಯ್ಕೆಯಾಗಿದ್ದರೆ, ಮೂರು ಸದಸ್ಯರು ಬಿಜೆಪಿ ಬೆಂಬಲಿತರು ಆಯ್ಕೆಯಾಗಿದ್ದರು. ಹನ್ನೊಂದು ಸದಸ್ಯರು ಭಟ್ಕಳದ ತಝೀಂ ಸಂಸ್ಥೆಯ ಬೆಂಬಲದಿಂದ ಆಯ್ಕೆಯಾದವರು ಇದ್ದು ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನವನ್ನು ತಂಝಿಂ ಬೆಂಬಲಿತರು ಪಡೆದರು.
ತಹಸೀಲ್ದಾರ ರವಿಚಂದ್ರ ಚುನಾವಣಾ ಪ್ರಕ್ರಿಯೆ ನಡೆಸಿದರು.