ಆದ್ಯೋತ್ ಸುದ್ದಿನಿಧಿ:
ಕೃಷಿಉತ್ಪನ್ನ ಮಾರುಕಟ್ಟೆ ಸಮಿತಿ ಹಾಗೂ ಸಹಕಾರಿ ಸಂಘಗಳನ್ನು ಉಳಿಸಲು ಅರೇಕಾ ಛೆಂಬರ್ ಮನವಿ
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಅಡಿಕೆಮನೆಯಲ್ಲಿ ಕರ್ನಾಟಕ ಅರೇಕಾ ಛೇಂಬರ್ ಆಪ್ ಕಾಮರ್ಸ ಅಧ್ಯಕ್ಷ ಆರ್.ಎಸ್. ಹೆಗಡೆ ಹರಗಿ ಪತ್ರಿಕಾಗೋಷ್ಠಿ ನಡೆಸಿದರು.
ರಾಜ್ಯ ಸರಕಾರ 1966 ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ಅಧಿನಿಯಮವನ್ನು ಮೇ15 ರಂದು ಸುಗ್ರಿವಾಜ್ಞೆ ಮೂಲಕ ತಿದ್ದುಪಡಿ ಮಾಡಿದ್ದು,ಎಪಿಎಂಸಿ ಪ್ರಾಂಗಣದ ಹೊರಗೆ ರೈತ ತನ್ನ ಕೃಷಿ ಉತ್ಪನ್ನವನ್ನು ಮುಕ್ತವಾಗಿ ಮಾಡಲು ಅನಕೂಲ ಮಾಡಿಕೊಟ್ಟಿದೆ. ಇದರಿಂದ ರೈತರ ಹಿತರಕ್ಷಣೆ ಮಾಡುತ್ತ ಬಂದಿದ್ದ ಎಪಿಎಂಸಿ ಹಾಗೂ ಸಹಕಾರಿ ಸಂಘಗಳು ಹಂತ ಹಂತವಾಗಿ ಮುಚ್ಚಿ ಹೋಗಲಿವೆ ಎಂದು ಆರ್.ಎಸ್.ಹೆಗಡೆ ಆತಂಕ ವ್ಯಕ್ತಪಡಿಸಿದರು.
ರೈತರ ಉತ್ಪನ್ಮವನ್ನು ಹೊರಗೆ ಮಾರಿದರೆ ಯಾವುದೇ ಶುಲ್ಕವಿಲ್ಲ ಎಪಿಎಂಸಿ ಪ್ರಾಂಗಣದಲ್ಲಿ ಮಾರಿದರೆ ಶೇ.1 ಸೆಸ್ ಕಟ್ಟಬೇಕು ಎಂದು ಕಾನೂನು ರೂಪಿಸಲಾಗಿದೆ. ಇದರಿಂದ ರೈತರು ತಮ್ಮ ಉತ್ಪನ್ನಗಳನ್ನು ಹೊರಗೆ ಮಾರುತ್ತಾನೆ. ಅಡಿಕೆಯಂತಹ ಉತ್ಪನ್ನಕ್ಕೆ ಇದು ದೊಡ್ಡ ಹೊಡೆತವನ್ನು ನೀಡಲಿದೆ. ಅಡಿಕೆಗೆ ಸ್ಥಿರವಾದ ದರ ಇರುವುದಿಲ್ಲ ಎಪಿಎಂಸಿ ಮೂಲಕ ವ್ಯವಹಾರ ನಡೆದರೆ ದರದಬಗ್ಗೆ ರೈತರಿಗೆ ತಿಳಿಯುತ್ತದೆ.ಹೊರಗಡೆ ಮಾರಲು ಪ್ರಾರಂಭಿಸಿದರೆ ಖಾಸಗಿ ವ್ಯಾಪಾರಿ ಹೇಳಿದ್ದೆ ದರವಾಗುತ್ತದೆ ಎಂದು ಹೇಳಿದರು.
ಅರೇಕಾ ಛೇಂಬರ್ ಈಗಾಗಲೇ ಅಡಿಕೆ ಬೆಳೆಗಾರರ ಹಿತ ರಕ್ಷಿಸಲು ಸಾಕಷ್ಟು ಹೋರಾಟವನ್ನು ಮಾಡಿದೆ. ಅಡಿಕೆ ವ್ಯಾಪಾರಸ್ಥರಿಗೆ ಕಾನೂನಾತ್ಮಕ ಸಮಸ್ಯೆ ಉಂಟಾದಾಗ ಹೋರಾಟ ಮಾಡಿದೆ ಗುಟ್ಕಾ ಬ್ಯಾನ್ ಮಾಡಿದ ಸಂದರ್ಭದಲ್ಲಿ ಲಕ್ಷಾಂತರ ಬೆಳೆಗಾರರನ್ನು ಸೇರಿಸಿ ಹೋರಾಟ ಮಾಡಲಾಗಿತ್ತು. ಈಗ ಅಂತಹದ್ದೆ ಸಂದರ್ಭ ಬಂದಿದೆ. ರೈತರಿಗೆ ಸ್ಪರ್ಧಾತ್ಮಕ ಧಾರಣೆ ಸಿಗಲು, ಎಪಿಎಂಸಿ ಪ್ರಾಂಗಣ ವ್ಯಾಪಾರ ಉಳಿಸಿಕೊಳ್ಳಲು, ದಲ್ಲಾಳಿಗಳ ಮತ್ತು ಕಾರ್ಮಿಕರ ಹಿತರಕ್ಷಣೆ ಮಾಡಲು, 60-65 ವರ್ಷದಿಂದ ಅಭಿವೃದ್ಧಿ ಪಡಿಸಿದ ಮಾರುಕಟ್ಟೆ ಉಳಿಸಿಕೊಳ್ಳಲು ಅರೆಕಾ ಛೇಂಬರ್ ರಾಜ್ಯಾದ್ಯಂತ ಮುಷ್ಕರ ನಡೆಸಲು ತೀರ್ಮಾನಿಸಿದೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಈಗಾಗಲೆ ಬಾಯ್ ಕಟ್ ಮಾಡುವ ಮೂಲಕ ಹೋರಾಟ ಪ್ರಾರಂಭವಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಅರೇಕಾ ಛೇಂಬರ್ ಕಾರ್ಯದರ್ಶಿ ಆರ್.ಎಂ.ಪಾಟೀಲ್, ಸಿದ್ದಾಪುರ ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಪ್ರಕಾಶ ಹೆಗಡೆ, ಕಾರ್ಯದರ್ಶಿ ಜಿ.ಎಸ್.ಭಟ್ಟ ಕಲ್ಲಾಳ ಉಪಸ್ಥಿತರಿದ್ದರು.