ಸೂಕ್ತ ಸಂಬಳ,ಭತ್ಯೆ, ಆಲೋಪತಿ ಔಷಧ ನೀಡಲು ಅನುವ ಮಾಡಿಕೊಡುವ ಕಾನೂನು ಜಾರಿಗೆ ತರಲು ಆಗ್ರಹಿಸಿ ಆಯುಷ್ಯ ವೈದ್ಯರ ಮನವಿ

ಆದ್ಯೋತ್ ಸುದ್ದಿನಿಧಿ:
ಗುತ್ತಿಗೆ ಆಯುಷ್ ವೈದ್ಯರನ್ನು ಕೊವಿಡ್19 ಆಲೋಪತಿ ಚಿಕಿತ್ಸಾ ಆಸ್ಪತ್ರೆಗೆ ನಿಯೋಜನೆ ಮಾಡುತ್ತಿದ್ದು ಸೂಕ್ತ ಸಂಬಳ,ಭತ್ಯೆ ನಿಗದಿಪಡಿಸಬೇಕು ಹಾಗೂ ತುರ್ತು ಸಂದರ್ಭದಲ್ಲಿ ಆಲೋಪತಿ ಚಿಕಿತ್ಸೆ ನೀಡಲು ಸೂಕ್ತ ಕಾನೂನು ತಂದು ನಂತರ ನಿಯೋಜನೆ ಮಾಡಬೇಕು ಎಂದು ಆಗ್ರಹಿಸಿ ಸಿದ್ದಾಪುರ ತಾಲೂಕಿನ ಗುತ್ತಿಗೆ ಆಯುಷ್ಯ ವೈದ್ಯರು ಗುರುವಾರ ತಾಲೂಕು ವೈದ್ಯಾಧಿಕಾರಿ ಡಾ.ಲಕ್ಷ್ಮೀಕಾಂತ ನಾಯ್ಕ ಮೂಲಕ ಆರೋಗ್ಯ ಸಚೀವರಿಗೆ ಸಲ್ಲಿಸಿದರು.

ಸಾವಿರಾರು ಗುತ್ತಿಗೆ ಆಯುಷ್ ವೈದ್ಯರು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು ನಮ್ಮ ಕಾರ್ಯವ್ಯಾಪ್ತಿ ನಿಗದಿತ ಕೆಲಸ ಕಾರ್ಯಗಳಿಗೆ ಮಾತ್ರ ಸೀಮಿತವಾಗಿರುತ್ತದೆ.ಸರಕಾರಿ ನೌಕರರಿಗೆ ಸಿಗುವ ಯಾವುದೇ ಸೌಲಭ್ಯಗಳು ನಮಗೆ ಸಿಗುವುದಿಲ್ಲ.
ರಾಜ್ಯದಲ್ಲಿ ಕೊವಿಡ್ ಹೆಚ್ಚಾಗುತ್ತಿರುವುದರಿಂದ ಕೊವಿಡ್ ಕೇಂದ್ರದಲ್ಲಿ ಕಾರ್ಯನಿರ್ವಹಿಸಲು ಆಯುಷ್ ವೈದ್ಯರನ್ನು ನಿಯೋಜಿಸಲಾಗುತ್ತಿದೆ.
ಹಿಂದೆ ತುರ್ತು ಸಂದರ್ಭದಲ್ಲಿ ಆಯುಷ್ ವೈದ್ಯರು ಆಲೋಪತಿ
ಚಿಕಿತ್ಸೆ ನೀಡಲು ಸೂಕ್ತ ತರಬೇತಿ ನೀಡಬೇಕು ಹಾಗೂ ಚಿಕಿತ್ಸೆ ನೀಡಲು ಕಾನೂನು ತರಲು ಕೇಳಿಕೊಂಡಿದ್ದೇವೆ
ಆದರೆ ಸರಕಾರ ಇಲ್ಲಿಯವರೆಗೆಯಾವುದೇ
ಕಾನೂನನ್ನು ತಂದಿಲ್ಲ ತರಬೇತಿಯನ್ನೂ ನೀಡಿಲ್ಲ‌.
ಆಯುಷ್ ವೈದ್ಯರು ಆಲೋಪತಿ ಔಷಧ ನೀಡುವುದು ಕಾನೂನು ಬಾಹಿರವಾಗಿರುತ್ತದೆ.ಆದ್ದರಿಂದ ತುರ್ತುಸಂದರ್ಭದಲ್ಲಿ ಆಲೋಪತಿ ಔಷಧ ನೀಡಲು ಸೂಕ್ತ ಕಾನೂನು ರಚನೆ ಮಾಡಬೇಕು ಹಾಗೂ ಸೂಕ್ತ ತರಬೇತಿ ನೀಡಬೇಕು.
ಗುತ್ತಿಗೆ ಆಯುಷ್ ವೈದ್ಯರಿಗೆ ಕೊವಿಡ್ ನಿಯೋಜನೆ ಹೆಚ್ಚುವರಿಯಾಗಿ ಒಪ್ಪಂದ ಮಾಡಿಕೊಳ್ಳಬೇಕು,ಹೆಚ್ಚುವರಿ ಸಂಬಳ ನೀಡಬೇಕು.
ಕೊವಿಡ್ ಚಿಕಿತ್ಸೆ ನೀಡುವಾಗ ಪ್ರಾಣಾಪಾಯವಾದಲ್ಲಿ 50ಲಕ್ಷರೂ. ವಿಮೆ ನೀಡಲು ಸೂಕ್ತ ದಾಖಲಾತಿಗಳ ಕೊಡುವುದರ ಜೊತೆಗೆ ಮೃತಪಟ್ಟಲ್ಲಿ ನಾಮಿನಿಗೆ ಕೊಡಲು ನೊಂದಾಯಿಸಿ ಸಹಿ ಮಾಡಿದ ದಾಖಲೆಗಳನ್ನು ನೀಡಬೇಕು
ಇವೆಲ್ಲವನ್ನು ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ.
——-
ಈಗಾಗಲೆ ಆರೋಗ್ಯ ಸಚೀವ ಶ್ರೀರಾಮುಲುರವರು ಜುಲೈ20
ರಂದು ಮುಖ್ಯಮಂತ್ರಿಗಳ ಬಳಿ ನಿಯೋಗ ಒಯ್ಯಲು ಒಪ್ಪಿದ್ದಾರೆ
ಆದ್ದರಿಂದ ಗುತ್ತಿಗೆ ಆಯುಷ್ ವೈದ್ಯರು ಜುಲೈ20 ರವೆಗೆ ಸಾಮೂಹಿಕವಾಗಿ ಕೆಲಸಕ್ಕೆ ಗೈರಾಗಲು ನಿರ್ಧರಿಸಿದ್ದಾರೆ.

——–

About the author

Adyot

Leave a Comment