ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕು ಸದ್ಯ ಕೊವಿಡ್ ನಿಂದ ಮುಕ್ತಿ ಹೊಂದಿದ್ದು ಎಲ್ಲಾ 32ಜನರು ಕೊವಿಡ್ ಮುಕ್ತರಾಗಿ ಕೊವಿಡ್ ಕೇಂದ್ರದಿಂದ ಮರಳಿದ್ದಾರೆ.
ಭಟ್ಕಳ ಹೊರತು ಪಡಿಸಿ ಉಳಿದ ಹತ್ತು ತಾಲೂಕಿನಲ್ಲಿ ಪ್ರಥಮವಾಗಿ ಸೀಲ್ ಡೌನ್ ಆಗಿದ್ದು ಈ ತಾಲೂಕಿನಲ್ಲಾಗಿತ್ತು.
ಒಂದರ ಹಿಂದೆ ಒಂದು ಕೊವಿಡ್ ಪೊಸೆಟಿವ್ ಗಳು ಬರತೊಡಗಿದಾಗ ಜನರು ಆತಂಕಕ್ಕೆ ಒಳಗಾದರು.
ಪಟ್ಟಣದ ಪ್ರಮುಖ ಪ್ರದೇಶ ಸೀಲ್ ಡೌನ್ ಆಯಿತು,ಸರಕಾರಿ ಆಸ್ಪತ್ರೆಯ ವೈದ್ಯರಿಗೆ ಕೊವಿಡ್ ಕಾಣಿಸಿಕೊಂಡಿತು.ಬ್ಯಾಂಕ್ ವ್ಯವಸ್ಥಾಪಕರು ಕೊವಿಡ್ ನಿಂದ ನರಳಿದರು.ಒಟ್ಟಾರೆ ತಾಲೂಕಿನಲ್ಲಿ ಭಯ ಹಾಗೂ ಆತಂಕದ ಸ್ಥಿತಿ ನಿರ್ಮಾಣವಾಯಿತು.
ಸ್ಥಳೀಯ ಆಡಳಿತ ಹಾಗೂ ಆರೋಗ್ಯ ಇಲಾಖೆಯವರು ಸಣ್ಣಪುಟ್ಟ ತಪ್ಪುಗಳ ನಡುವೆಯೂ ಉತ್ತಮವಾಗಿ ಕಾರ್ಯನಿರ್ವಹಿಸಿದರು.
ಸಿದ್ದಾಪುರ ಪಟ್ಟಣದ ಕೊಂಡ್ಲಿಯಲ್ಲಿರುವ ವಿದ್ಯಾರ್ಥಿ ವಸತಿ ನಿಲಯವನ್ನು ಕೊವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಲಾಗಿತ್ತು.
ಕೊವಿಡ್ ಕೇರ್ ಕೇಂದ್ರದಲ್ಲಿ ಊಟ,ಉಪಹಾರ ಸೇರಿದಂತೆ ಪ್ತಾಥಮಿಕ ಅವಶ್ಯಕತೆಯ ವ್ಯವಸ್ಥೆ ಮಾಡಿದ್ದರಿಂದ ಕೊವಿಡ್ ಕೇರ್ ಸೆಂಟರ್ ಗೆ ಹೋಗುವಾಗ ಇದ್ದ ಆತಂಕ ಅಲ್ಲಿರುವಾಗ ಆಗಲಿಲ್ಲ ಎಂದು ಚಿಕಿತ್ಸೆ ಪಡದು ಗುಣಮುಖಳಾಗಿ ಹೊರಬಂದ ಯುವತಿ ಆದ್ಯೋತ್ ನ್ಯೂಸ್ ಗೆ ಪ್ರತಿಕ್ರಿಯಿಸಿದ್ದಾರೆ.
ಪಟ್ಟಣದಲ್ಲಿ ಸ್ವಯಂ ಲಾಕ್ ಡೌನ್ ವಿಧಿಸಿಕೊಂಡರೆ ಗ್ರಾಮೀಣ ಪ್ರದೇಶದಲ್ಲಿ ಜನರು ಜಾಗೃತರಾದ ಪರಿಣಾಮ ಹಾಗೂ ಆಶಾ ಕಾರ್ಯಕರ್ತೆಯರು,ಮಹಿಳಾ ಆರೋಗ್ಯ ಕಾರ್ಯಕರ್ತೆಯರ ಸತತ ನಿಗಾದ ಪರಿಣಾಮ ಹೊರ ರಾಜ್ಯದಿಂದ,ಬೇರೆ ಜಿಲ್ಲೆಯಿಂದ ಸಾಕಷ್ಟು ಜನರು ಬಂದರೂ ಕೊವಿಡ್ ಹರಡದಂತೆ ತಡೆಯಾಯಿತು
ಒಂದು ಸಾವಿರಕ್ಕೂ ಹೆಚ್ಚು ಗಂಟಲು ದ್ರವವನ್ನು ಪರೀಕ್ಷಿಸಲಾಗಿದ್ದು ಎಲ್ಲವೂ ನೆಗೆಟಿವ್ ಬಂದಿದೆ. ಇನ್ನು18 ಜನರ ವರದಿ ಬರಬೇಕಾಗಿದೆ.
ಒಟ್ಟಾರೆ ತಾಲೂಕು ಗ್ರೀನ್ ಝೊನ್ ನತ್ತ ಸಾಗುತ್ತಿದ್ದು ತಾಲೂಕಿನ ಜನರು ನಿಟ್ಟುಸಿರು ಬಿಡುವಂತಾಗಿದೆ.
ಕೊಂಡ್ಲಿಯ ಕೊವಿಡ್ ಕೇಂದ್ರದಿಂದ ನೆಗೆಟಿವ್ ಬಂದಿರುವ
ಕೊನೆಯ ಐದು ಜನರನ್ನು ಕಳುಹಿಸುತ್ತಿರುವ ಅಧಿಕಾರಿಗಳು