ಸಿದ್ದಾಪುರ ಲಯನ್ ಅಧ್ಯಕ್ಷರಾಗಿ ಶ್ಯಾಮಲಾ ಹೆಗಡೆ

ಆದ್ಯೋತ್ ಸುದ್ದಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಲಯನ್ ಕ್ಲಬ್ 2020-2021 ರ ಸಾಲಿನ ಅಧ್ಯಕ್ಷರನ್ನಾಗಿ ಶ್ಯಾಮಲಾ ರವಿ ಹೆಗಡೆ ಹೂವಿನಮನೆಯವರನ್ನು ಆಯ್ಕೆ ಮಾಡಲಾಗಿದೆ.
48ವರ್ಷದ ಸಿದ್ದಾಪುರ ಲಯನ್ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಮಹಿಳಾ ಅಧ್ಯಕ್ಷರು ಆಗಿದ್ದಾರೆ.

ಗುರುವಾರ ಸಿದ್ದಾಪುರ ಬಾಲಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಶಿವಮೊಗ್ಗ ಜಿಲ್ಲಾ ಮಾಜಿ ಲಯನ್ ಗವರ್ನರ್
ಸೊರಬಾದ ಹೆಚ್.ಎಸ್.ಮಂಜಪ್ಪ ಪ್ರಮಾಣವಚನ ಬೊಧಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದಹೆಚ್.ಎಸ್.ಮಂಜಪ್ಪ,ಲಯನ್
ಸಂಸ್ಥೆ ಸೇವಾಸಂಸ್ಥೆಯಾಗಿದ್ದು ಸದಸ್ಯರಾದವರು ಸೇವೆಯನ್ನೆ ತಮ್ಮ ಗುರಿಯನ್ನಾಗಿಸಿಕೊಳ್ಳಬೇಕು.ಸಮಾಜದ ಅಪೇಕ್ಷೆ ಕಾಲಕಾಲಕ್ಕೆ ಬದಲಾಗುತ್ತಿರುತ್ತದೆ.ಅದಕ್ಕೆ ತಕ್ಕಂತೆ ನಮ್ಮ ಸೇವೆಯೂ ಬದಲಾಗಬೇಕು.ಇಂದು ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದಲ್ಲಿ ನಮ್ಮ ಅವಶ್ಯಕತೆ ಇದೆ ಸಂಪನ್ಮೂಲವನ್ನು ಕ್ರೋಢಿಕರಿಸಿ ಸೇವೆ ಮಾಡಲು ಮುಂದಾಗಿ ಎಂದು ಸಲಹೆ ನೀಡಿದರು.

70-80ರ ದಶಕದಲ್ಲಿ ಸಿದ್ದಾಪುರ-ಸೊರಬಾದಂತಹ ತಾಲೂಕು ಕೇಂದ್ರಗಳು ಗ್ರಾಮೀಣ ಪ್ರದೇಶದ ಹಾಗೇ ಇತ್ತು ಅಂತಹ ಸೀಮಿತ ಅವಕಾಶದಲ್ಲೆ ಲಯನ್ ಸಂಸ್ಥೆಯನ್ನು ಸ್ಥಾಪಿಸಿ ಅದನ್ನು 48 ವರ್ಷದಷ್ಟು ಸುದೀರ್ಘ ಕಾಲದವರೆಗೆ ಯಶಸ್ವಿಯಾಗಿ ನಡೆಸಿಕೊಂಡು ಬಂದಿರುವುದು ಸಂಸ್ಥೆಯ ಸದಸ್ಯರ ಸೇವೆ ಮಾಡಬೇಕೆಂಬ ಮನೋಬಲಕ್ಕೆ ಸಾಕ್ಷಿಯಾಗಿದೆ ಮಹಿಳೆಯರ ಸಬಲೀಕರಣದ ಕೂಗು ಕೇಳಿಬರುತ್ತಿರುವ ಈ ಸಮಯದಲ್ಲಿ ಮಹಿಳಾ ಅಧ್ಯಕ್ಷರನ್ನು ಮಾಡಿರುವ ಲಯನ್ ಸಂಸ್ಥೆಯ ಕಾರ್ಯ ಸಮಯೋಚಿತವಾಗಿದೆ ಎಂದು ಹೇಳಿದರು.
ಡಾ.ರವಿ ಹೆಗಡೆ ಹೂವಿನಮನೆ,ಲಯನ್ ಹಾಲಿ ಅಧ್ಯಕ್ಷ ಲಯನ್ಸಿ.ಎಸ್.ಗೌಡರ್,ಲ.ಬಿ.ಜಿ.ಜೋಷಿ,ಲ.ಜಿ.ಜಿ.ಹೆಗಡೆ,ಲಯನ್ ಸತೀಶ ಗೌಡರ್ ಮುಂತಾದವರು ಉಪಸ್ಥಿತರಿದ್ದರು.

About the author

Adyot

Leave a Comment