ಆದ್ಯೋತ್ ಸುದ್ದಿನಿಧಿ:
ರಾಜ್ಯದ ಹತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಆಶ್ಲೇಷ ಮಳೆಯ ಅಬ್ಬರದಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದೆ ಸಾವಿರಾರು ಜನರು ಮನೆಮಠಗಳನ್ನು ಕಳೆದುಕೊಂಡಿದ್ದಾರೆ ಇದರ ಜೊತೆಗೆ ಮನೆಯಲ್ಲಿದ್ದ ವಸ್ತುಗಳು ನೀರು ಪಾಲಾಗಿದ್ದು ಜನರು ಕಂಗಾಲಾಗಿದ್ದಾರೆ.ಕೊವಿಡ್ ಸಂಕಷ್ಟದ ನಡುವೆಯೂ ಪ್ರವಾಹ ಪೀಡಿತ ಜನರ ಸಹಾಯಕ್ಕೆ ಸರಕಾರ ಧಾವಿಸಿದ್ದು ಪ್ರವಾಹದಿಂದಾದ ಹಾನಿಗೆ ಸರಕಾರ ನೀಡುವ ಪರಿಹಾರವನ್ನು ಪರಿಷ್ಕೃತಗೊಳಿಸಿದೆ.ಇದರಿಂದ ಜನರು ಒಂದಿಷ್ಟು ನಿರಾಳವಾಗಲು ಸಾಧ್ಯವಿದೆ.