ಸಿದ್ದಾಪುರದಲ್ಲಿ ಹೆಸ್ಕಾಂ ನೌಕರ ಆತ್ಮಹತ್ಯೆ?

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಸೋಮವಾರ
ಹೆಸ್ಕಾಂ ನೌಕರನೊಬ್ಬ ನೇಣು ಬಿಗಿದ ಸ್ಥಿತಿಯಲ್ಲಿ ಮೃತನಾಗಿರುವುದು ಕಂಡು ಬಂದಿದ್ದು
ಆತ್ಮಹತ್ಯೆ ಎಂದು ಶಂಕಿಸಲಾಗಿದೆ.
ಸಿದ್ದಾಪುರ ಹೆಸ್ಕಾಂ ಕಚೇರಿಯಲ್ಲಿ ಮೀಟರ್ ರೀಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಜಾಕೀರ್ ಮಿರ್ಜಾ ಗಾಲೀಬ್(32) ಆತ್ಮಹತ್ಯೆಗೆ ಶರಣಾದವನೆಂದು ಗುರುತಿಸಲಾಗಿದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಸಜ್ಜನಕೆರೆಯ ಜಾಕೀರ್ ಕಳೆದ ಎರಡು ವರ್ಷದಿಂದ ಇಲ್ಲಿ ಕೆಲಸ ಮಾಡುತ್ತಿದ್ದ.
ಈತನಿಗೆ ಮದುವೆಯಾಗಿದ್ದು 6 ವರ್ಷದ ಮಗನಿದ್ದಾನೆ ಪತಿ-ಪತ್ನಿ ಅನ್ಯೋನ್ಯವಾಗಿದ್ದು,ಇದೇ ವರ್ಷದ ಜೂನ್ 24 ರಂದು ಇತನ ಪತ್ನಿ ಎರಡನೇ ಹೆರಿಗೆಯ ಸಮಯದಲ್ಲಿ ಮೃತಳಾಗಿದ್ದು
ಮಗುವು ಮೃತವಾಗಿತ್ತು ಇದರಿಂದ ಮಾನಸಿಕವಾಗಿ ನೊಂದಿದ್ದ
ಎಂದು ತಿಳಿದು ಬಂದಿದೆ.ಇದರಿಂದಾಗಿಯೇ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ.
ಸ್ಥಳೀಯ ಪೊಲೀಸ್ ರು ತನಿಖೆ ನಡೆಸುತ್ತಿದ್ದಾರೆ.

About the author

Adyot

Leave a Comment