ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯಲ್ಲಿ ಗುರುವಾರ 64 ಕೊವಿಡ್ ಪ್ರಕರಣಗಳು ದಾಖಲಾಗಿದ್ದು ಎರಡು ಜನರು ಮೃತರಾಗಿದ್ದಾರೆ. ಸಿದ್ದಾಪುರದಲ್ಲಿ ಏಳು ಪ್ರಕರಣಗಳು ದಾಖಲಾಗಿದ್ದು ಒಟ್ಟು ಕೊವಿಡ್ ಪಾಸಿಟಿವ್ ಸಂಖ್ಯೆ 53ಕ್ಕೆ ಏರಿದೆ. ಒಟ್ಟೂ 21 ಕೊವಿಡ್ ಸಕ್ರೀಯ ಪ್ರಕರಣಗಳಿದೆ. ಉಳಿದ 32 ವ್ಯಕ್ತಿಗಳು ಗುಣಮುಖರಾಗಿದ್ದಾರೆ.
ಕಾರವಾರದಲ್ಲಿ ಒಬ್ಬ ವ್ಯಕ್ತಿ ಹಾಗೂ ಸ್ಥಳೀಯ ಸರಕಾರಿ ಆಸ್ಪತ್ರೆಯಲ್ಲಿ ಒಂದು ಮಗು ದಾಖಲಾಗಿದ್ದರೆ ಕೊಂಡ್ಲಿಯಲ್ಲಿರುವ ಕೊವಿಡ್ ಕೇಂದ್ರದಲ್ಲಿ ಏಳು ಜನರಿದ್ದಾರೆ. ಅರೆಂದೂರು ಹಾಗೂ ಇಟಗಿಯಲ್ಲಿರುವ ಉಳಿದ ಪಾಸಿಟಿವ್ ವ್ಯಕ್ತಿಗಳನ್ನು ಮನೆಯಲ್ಲೇ ಐಸೋಲೇಷನ್ ಮಾಡಲಾಗಿದೆ ಹಾಗೂ ಎರಡು ಪ್ರಕರಣ ಹೊರತು ಪಡಿಸಿ ಉಳಿದ ವ್ಯಕ್ತಿಗಳಲ್ಲಿ ಕೊವಿಡ್ ನ ಯಾವುದೇ ಲಕ್ಷಣಗಳಿಲ್ಲ ಎಂದು ತಹಸೀಲ್ದಾರ ಮಂಜುಳಾ ಭಜಂತ್ರಿ ಆದ್ಯೋತ್ ನ್ಯೂಸ್ ಗೆ ತಿಳಿಸಿದ್ದಾರೆ.