ಗಣೇಶ ಚತುರ್ಥಿ ಆಚರಣೆಗೆ ಸರಕಾರದ ಮಾರ್ಗ ಸೂಚಿ ಬಿಡುಗಡೆ

ಆದ್ಯೋತ್ ಸುದ್ದಿನಿಧಿ:

ಅಗಸ್ಟ್ 22 ಶನಿವಾರ ಗಣೇಶ ಚತುರ್ಥಿ ಹಬ್ಬವಿದ್ದು ಈ ಬಾರಿ ದೇವಸ್ಥಾನ ಹೊರತು ಪಡಿಸಿ ಉಳಿದ ಸಾರ್ವಜನಿಕ ಸ್ಥಳದಲ್ಲಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸುವಂತಿಲ್ಲ ಎಂದು ಸರಕಾರ ಮಾರ್ಗ ಸೂಚಿಯನ್ನು ಪ್ರಕಟಿಸಿದೆ.

ಮನೆಯಲ್ಲಿ ಗಣಪತಿ ಸ್ಥಾಪಿಸಲು ಅವಕಾಶ ನೀಡಿದೆ ಆದರೆ ವಿಸರ್ಜನೆ ಮನೆಯ ಆವರಣದಲ್ಲೆ ಮಾಡಬೇಕು. ಸಾರ್ವಜನಿಕ ಬಾವಿ,ಕೆರೆ,ಹಳ್ಳ-ಕೊಳ್ಳಗಳಲ್ಲಿ ಗಣಪತಿ ಮೂರ್ತಿಯನ್ನು ವಿಸರ್ಜಿಸುವಂತಿಲ್ಲ. ಮೆರವಣಿಗೆ ಮಾಡುವಂತಿಲ್ಲ. ದೇವಸ್ಥಾನದಲ್ಲಿ ಸ್ಯಾನಿಟೆಸರ್ ಕಡ್ಡಾಯವಾಗಿ ಮಾಡಬೇಕು. ಕನಿಷ್ಠ 6 ಅಡಿ ಅಂತರದಿಂದ ದರ್ಶನ ಮಾಡಬೇಕು ಇತ್ಯಾದಿ ನಿಯಮಗಳನ್ನು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

About the author

Adyot

Leave a Comment