ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದ ಬಾಲಭವನದಲ್ಲಿ ಬ್ಲಾಕ್ ಕಾಂಗ್ರೆಸನ ನೂತನ ಅಧ್ಯಕ್ಷ ವಸಂತ ನಾಯ್ಕ ಮನಮನೆ ಸುದ್ದಿಗೋಷ್ಠಿ ನಡೆಸಿದರು.
ತಾಲೂಕಿನಲ್ಲಿ ಸಾಕಷ್ಟು ಸಮಸ್ಯೆಗಳಿದ್ದು ಅದನ್ನು ಬಗೆಹರಸಲು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿಯವರು ವಿಫಲವಾಗಿದ್ದಾರೆ. ತಾಲೂಕಿನ ಕಂದಾಯ,ಅರಣ್ಯ,ಆರೋಗ್ಯ ಸೇರಿದಂತೆ ಹೆಚ್ಚಿನ ಎಲ್ಲಾ ಇಲಾಖೆಗಳಲ್ಲೂ ಸಾರ್ವಜನಿಕ ಕೆಲಸ ಕಾರ್ಯಗಳು ನಡೆಯುತ್ತಿಲ್ಲ ಶಾಸಕರು ಯಾವುದೇ ಅಧಿಕಾರಿಗಳನ್ನು ಪ್ರಶ್ನಿಸುತ್ತಿಲ್ಲ ಅಧಿಕಾರಿಗಳು ತಮ್ಮ ಮನಸೋ ಇಚ್ಚೆ ಕಾರ್ಯಗಳನ್ನು ನಡೆಸುತ್ತಿದ್ದು ಇದರಿಂದ ಜನರು ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ವಸಂತ ನಾಯ್ಕ ಹೇಳಿದರು.
ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರರವರು ನನ್ನನ್ನು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರನ್ನಾಗಿ ನಿಯಮಿಸಿದ್ದಾರೆ ಇದಕ್ಕೆ ಕಾಂಗ್ರೆಸ್ ನ ಹಿರಿಯ ನಾಯಕರಾದ ಮಾರ್ಗರೆಟ್ ಆಳ್ವಾ,ಆರ್.ದೇಶಪಾಂಡೆ,ಸತೀಶ ಜಾರಕಿಹೊಳೆ,ಸಲಿಂ ಅಹ್ಮದ್,ಈಶ್ವರ ಖಂಡ್ರೆ,ಭೀಮಣ್ಣ ನಾಯ್ಕ,ಸಂತೋಶ ಶೆಟ್ಟಿ ಮುಂತಾದವರು ಸಹಮತ ವ್ಯಕ್ತಪಡಿಸಿದ್ದಾರೆ. ತಾಲೂಕಿನಲ್ಲಿ ಪಕ್ಷವನ್ನು ಸಶಕ್ತವಾಗಿ ಕಟ್ಟುವತ್ತ ನಾನು ಕಾರ್ಯಪ್ರವರ್ತನಾಗುತ್ತೇನೆ ನಮ್ಮ ಮುಖಂಡರು,ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂಬರುವ ಗ್ರಾಪಂ ಚುನಾವಣೆಯಲ್ಲಿ ನಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಗೆದ್ದು ಬರುವಂತೆ ಮಾಡುತ್ತೇನೆ ಎಂದು ಹೇಳಿದರು.
ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೀಮಾ ಹೆಗಡೆ ಮಾತನಾಡಿ, ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ತಾಲೂಕಿನ ಎಲ್ಲಾ ಇಪ್ಪತ್ತಮೂರು ಗ್ರಾಪಂ ವ್ಯಾಪ್ತಿಯಲ್ಲೂ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಐದು ಸದಸ್ಯರ ಸಮಿತಿಯನ್ನು ಮಾಡಿ ಪಕ್ಷಕ್ಕೆ ಮಹಿಳೆಯರನ್ನು ಯುವಕರನ್ನು ಸೇರ್ಪಡೆಗೊಳಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ವಿ.ಎನ್.ನಾಯ್ಕ ಬೇಡ್ಕಣಿ,ಹನುಮಂತ ನಾಯ್ಕ ಹೊಸೂರು,ಸಿ.ಆರ್.ನಾಯ್ಕ,ತಾಪಮ ಸದಸ್ಯ ನಾಸೀರ್ ವಲ್ಲಿಖಾನ್,ಡಿಸಿಸಿ ಕಾರ್ಯದರ್ಶಿ ಸಾವೇರ್ ಡಿಸಿಲ್ವಾ,ಚಂದ್ರಕಾಂತ ನಾಯ್ಕ ಮುಂತಾಧವರು ಉಪಸ್ಥಿತರಿದ್ದರು.
****************************************
ತಾಲೂಕಿನಲ್ಲಿ ಕೊವಿಡ್ ಪ್ರಕರಣ ಹೆಚ್ಚಳ
ತಾಲೂಕಿನಲ್ಲಿ ಕೊವಿಡ್ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಶುಕ್ರವಾರ ಹಸರಗೋಡು ಗ್ರಾಪಂ ವ್ಯಾಪ್ತಿಯ ಹೊಸಗದ್ದೆಯಲ್ಲಿ ಮೂರು ವರ್ಷದ ಮಗು ಸೇರಿದಂತೆ 8 ಜನರಲ್ಲಿ ಕೊವಿಡ್ ಕಾಣಿಸಿಕೊಂಡಿದೆ.
ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಸಮೂಹವಾಗಿ ಕೊವಿಡ್ ಪರೀಕ್ಷೆ ನಡೆಸಲಾಗುತ್ತಿದ್ದು ದಿನ ದೊನಗಳಲ್ಲಿ ಕೊವಿಡ್ ಪ್ರಕರಣ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.
ಇಂದಿನ 8 ಪ್ರಕರಣವೂ ಸೇರಿದಂತೆ ಒಟ್ಟೂ 61 ಕೊವಿಡ್ ಪ್ರಕರಣಗಳು ಇಲ್ಲಿಯವರೆಗೆ ದಾಖಲಾಗಿದ್ದು ಅದರಲ್ಲಿ 29 ಸಕ್ರೀಯ ಪ್ರಕರಣವಾಗಿದೆ ಉಳಿದವರು ಸಂಪೂರ್ಣ ಗುಣಮುಖರಾಗಿದ್ದಾರೆ.ಐದು ವರ್ಷದ ಮಗು ಹಾಗೂ 51 ವರ್ಷದ ವ್ಯಕ್ತಿ ಈ ಇಬ್ಬರಲ್ಲಿ ಕೊವಿಡ್ ಲಕ್ಷಣ ಕಂಡುಬಂದಿದ್ದು ಬಿಟ್ಟರೆ ಉಳಿದವರಲ್ಲಿ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ.