ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಶಂಕರಮಠದಲ್ಲಿ ಜಿಲ್ಲಾಧಿಕಾರಿ ಡಾ.ಹರೀಶಕುಮಾರ ಅಧ್ಯಕ್ಷತೆಯಲ್ಲಿ ಶನಿವಾರ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಅಭಿನಂದನಾ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಡಾ.ಹರೀಶಕುಮಾರ,ಉತ್ತರಕನ್ನಡ ಜಿಲ್ಲೆಯಲ್ಲಿ ಕೊವಿಡ್ ನಿಂದ ಯಾವುದೇ ವ್ಯಕ್ತಿ ಮರಣಹೊಂದಿಲ್ಲ,ಕೊವಿಡ್ ಪೀಡಿತರೆಲ್ಲರೂ ಗುಣಮುಖರಾಗಿದ್ದಾರೆ,ಲಾಕ್ ಡೌನ್ ಯಶಸ್ವಿಯಾಗಿರುವುದಲ್ಲದೆ ಜನರಿಗೆ ಅಗತ್ಯ ವಸ್ತುಗಳನ್ನು ಮನೆಗೆ ತಲುಪಿಸುವ ಕಾರ್ಯಮಾಡಲಾಗಿದೆ.ಹೊರ ರಾಜ್ಯದಿಂದ ಬಂದವರನ್ನು ಕ್ವಾರೆಂಟೆನ್ ಮಾಡಲಾಗಿದೆ.ಒಟ್ಟಾರೆ ಜಿಲ್ಲೆಯಾದ್ಯಂತ ಕೊವಿಡ್ ನಿಯಂತ್ರಣ ಮಾಡಲಾಗಿದೆ ಇದರ ಹಿಂದೆ ಆಶಾಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾಯಕರ್ತೆಯರ ಪರಿಶ್ರಮವಿದೆ ಎಂದು ಹೇಳಿದರು.
ಕೊವಿಡ್ ಕುರಿತು ಸಾಕಷ್ಟು ತಪ್ಪು ಭಾವನೆಗಳಿವೆ ಇದೆಲ್ಲವನ್ನು ಹೋಗಲಾಡಿಸುವುದು ಕೊವಿಡ್ ವಾರಿಯರ್ಸ್ ಕೆಲಸವಾಗಿದೆ ಮನುಷ್ಯನ ಓಡಾಟವನ್ನು ತಡೆಯಲು ಸಾಧ್ಯವಾಗುವುದಿಲ್ಲ ಇದರಿಂದಾಗಿ ಇನ್ನು ಮುಂದೆ ಲಾಕ್‍ಡೌನ್ ಮಾಡುವುದಿಲ್ಲ ಕೊವಿಡ್ ಜೊತೆಗೆ ನಾವು ಬದುಕುವುದನ್ನು ಜನರಿಗೆ ಹೇಳಿಕೊಡಬೇಕು ಹೊರಗಿನಿಂದ ಬರುವವರನ್ನು ಗಮನಿಸಬೇಕು, ಸೊಂಕಿನ ಲಕ್ಷಣವಿದ್ದರೆ ಅಂತಹವರಿಗೆ ಚಿಕಿತ್ಸೆಗೆ ಕಳುಹಿಸುವ ವ್ಯವಸ್ಥೆ ಮಾಡಬೇಕು. ಮುಂದಿನ ದಿನಗಳಲ್ಲಿ ವ್ಯಾಪಕವಾದ ಸರ್ವೆಯನ್ನು ಮಾಡಬೇಕಾಗುವುದು ಕೆಮ್ಮು,ಜ್ವರ ಇರುವುದೋ ಎಂದು ಪರೀಕ್ಷಿಸಬೇಕಾಗುವುದು ಇದರಲ್ಲಿ ಸಾಮನ್ಯ ಜ್ಞಾನವನ್ನು ನಾವು ತೋರಿಸಬೇಕು ಕೆಮ್ಮು,ಜ್ವರ ಇರುವವರೆಲ್ಲರೂ ಕೊರೊನಾ ರೋಗಿಗಳಲ್ಲ ಎಂಬ ಪರಿಜ್ಞಾನ ನಮಗಿರಬೇಕು ಜನರನ್ನು ಈ ವಿಷಯದಲ್ಲಿ ಎಚ್ಚರಿಸಬೇಕು ಸಮುದಾಯಕ್ಕೆ ಪ್ರಜ್ಞೆ ಮೂಡಿಸುವ ಕೆಲಸ ಮಾಡಬೇಕಾಗಿದೆ. ಎಂದು ಹೇಳಿದರು.
ಜಿಲ್ಲೆಯಲ್ಲಿ ಮಲ್ಟಿನೆಷನಲ್ ಆಸ್ಪತ್ರೆ ಇಲ್ಲದಿರಬಹುದು ಆದರೆ ಕೊರೊನಾ ಚಿಕಿತ್ಸೆ ನೀಡುವ 300 ಹಾಸಿಗೆಯ ಸುಸುಜ್ಜಿತ ಆಸ್ಪತ್ರೆ ಇದೆ ಅಲ್ಲದೆ ಮುಂದಿನ ದಿನಗಳಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ,ಮನೆಯಲ್ಲಿ ಚಿಕಿತ್ಸೆ ಪಡೆಯಬೇಕಾಗುತ್ತದೆ
ಕೆಲವು ನಿಯಮಗಳನ್ನು ಪಾಲಿಸುತ್ತ ಕೊವಿಡ್ ಜೊತೆಗೆ ಜೀವಿಸುವುದು ಅನಿವಾರ್ಯವಾಗಿದೆ.ಇದನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು
ಆಶಾಕಾರ್ಯಕರ್ತೆಯರು,ಅಂಗನವಾಡಿ ಕಾರ್ಯಕರ್ತೆಯರು ಪ್ರಾಮುಖ್ಯತೆ ಎಷ್ಟು ಎನ್ನುವುದು ಜನರಿಗೆ, ಆಡಳಿತಕ್ಕೆ ತಿಳಿದುಬಂದಿದೆ ಎಷ್ಟೆ ತೊಂದರೆಗಳು ಬಂದರೂ ಎದುರಿಸಿ ಲಾಕ್‍ಡೌನ್ ಸಮಯದಲ್ಲಿ ಜನರ ಕಷ್ಟಕ್ಕೆ ಸ್ಪಂದಿಸಿದರು ಇಂತಹವರನ್ನು ಅಭಿನಂದಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.
ಸಭೆಯಲ್ಲಿ ತಹಸೀಲ್ದಾರ ಮಂಜುಳಾ ಭಜಂತ್ರಿ,ತಾಪಂ ಮುಖ್ಯಾಧಿಕಾರಿ ಪ್ರಶಾಂತ ರಾವ್,ಸಿಪಿಐ ಪ್ರಕಾಶಡಾ.ಲಕ್ಷ್ಮೀಕಾಂತ ನಾಯ್ಕ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕೆಲವು ಹೊಂಗಾರ್ಡರನ್ನು ಕೆಲಸದಿಂದ ತೆಗೆಯಲಾಗಿದ್ದು ಪುನ: ತಮ್ಮನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕೆಂದು ಹೊಂಗಾರ್ಡರು ಜಿಲ್ಲಾಧಿಕಾರಿಗಳು ಮನವಿ ನೀಡಿದರು.
Really hats up our honorable DC sr n Asha , Angabanvadi sisters.