ಬಿಜೆಪಿಯಿಂದ ಆಶಾ ಕಾರ್ಯಕರ್ತೆಯರಿಗೆ ಸೀರೆ ವಿತರಣೆ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆ ಸಿದ್ದಾಪುರದಲ್ಲಿ ಮಂಗಳವಾರ ತಾಲೂಕು ಬಿಜೆಪಿ ಘಟಕದವತಿಯಿಂದ ತಾಲೂಕಿನ 148
ಆಶಾಕಾರ್ಯಕರ್ತೆಯರಿಗೆ ಸೀರೆ ವಿತರಿಸಲಾಯಿತು.

ಪಟ್ಟಣದ ಬಾಲಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೀರೆ ವಿತರಣೆ ಮಾಡಿ ಮಾತನಾಡಿದ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಕೆ.ಜಿ.ನಾಯ್ಕ ಹಣಜೀಬೈಲ್,ಕೊವಿಡ್ ಎಂಬ ಮಹಾಮಾರಿ ಜಗತ್ತಿನ ಎಲ್ಲಾ ದೇಶಗಳಲ್ಲೂ ಅಲ್ಲೋಲ-ಕಲ್ಲೋಲ ಸೃಷ್ಠಿಸಿದ್ದು ನಮ್ಮ ದೇಶದಲ್ಲೂ ತೊಂದರೆಯನ್ನು ಕೊಡುತ್ತಿದೆ ಜನರ ಓಡಾಟವನ್ನೆ ತಡೆಗಟ್ಟಿ ದೇಶದ ಆರ್ಥಿಕ ಪರಿಸ್ಥಿತಿಯನ್ನು ಹದಗೆಡಿಸಿದೆ ಇಂತಹ ಆತಂಕದ ಸಂದರ್ಭದಲ್ಲಿ ಕೊವಿಡ್
ವಾರಿಯರ್ಸ್ ಆಗಿ ಆರೋಗ್ಯ,ಕಂದಾಯ,ಪೊಲೀಸ್,ಅಂಗನವಾಡಿ,ಸ್ಥಳೀಯ ಆಡಳಿತಗಳು ಮುಂತಾದ ಕೆಲವು ಇಲಾಖೆಯವರು ಅಹರ್ನಿಶವಾಗಿ ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡಿದರು ಇದರಲ್ಲಿ ತಳಮಟ್ಟದಲ್ಲಿ ಆಶಾಕಾರ್ಯಕರ್ತೆಯರು ಕೆಲಸ ಮಾಡುತ್ತಿದ್ದು ಯಾವುದಕ್ಕೂ ಹೆದರದೆ ಕಡಿಮೆ ಸಂಬಳವನ್ನು ಪಡೆದರೂ ಪ್ರಾಮಾಣಿಕ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಇಂತಹ ಕೊವಿಡ್ ವಾರಿಯರ್ಸ್‍ ಗೆ ಸಣ್ಣ ಸಹಾಯವನ್ನು ನೀಡಬೇಕು ಬರುವ ಗೌರಿ ಹಬ್ಬಕ್ಕೆ ಇದು ಅವರಿಗೆ ಊಡುಗೊರೆ ಆಗಿರಬೆಕು ಎಂಬ ಉದ್ದೇಶದಿಂದ ನಮ್ಮ ಸಚೀವರಾದ ಶಿವರಾಮ ಹೆಬ್ಬಾರರು ತಾಲೂಕಿನ ಎಲ್ಲಾ 148 ಆಶಾಕಾರ್ಯಕರ್ತೆಯರಿಗೂ ತಲಾ ಎರಡರಂತೆ ಸೀರೆ ನೀಡುವಂತೆ ಸೂಚಿಸಿದ್ದರು ಆ ಪ್ರಕಾರವಾಗಿ ಇಂದು ಸೀರೆ ವಿತರಣೆಯನ್ನು ಮಾಡಲಾಗುತ್ತಿದೆ.ಈಗಾಗಲೆ ಸಚೀವ ಹೆಬ್ಬಾರರು ಶಿರಸಿ ತಾಲೂಕಿನಲ್ಲೂ ಆಶಾಕಾರ್ಯಕರ್ತೆಯರಿಗೆ ಸೀರೆ ವಿತರಿಸಿದ್ದಾರೆ.
ಇಲ್ಲಿ ವಸ್ತುವಿನ ಮೌಲ್ಯ ನೋಡುವುದಲ್ಲ ನಿಮ್ಮನ್ನು ಗುರುತಿಸಿ ನಿಮ್ಮ ಜೊತೆಗೆ ನಾವಿದ್ದೇವೆ ಎಂದು ಹೇಳುವುದೇ ಬಿಜೆಪಿಯ ಉದ್ದೇಶವಾಗಿದೆ ಎಂದು ಹೇಳಿದರು.

ಪ್ರಾಸ್ತಾವಿಕ ಮಾತನಾಡಿದ ತಾಲೂಕು ಬಿಜೆಪಿ ಅಧ್ಯಕ್ಷ ನಾಗರಾಜ ನಾಯ್ಕ ಬೆಡ್ಕಣಿ,ಕೊವಿಡ್ ಪ್ರಾರಂಭವಾದಾಗ ಶಿವರಾಮ ಹೆಬ್ಬಾರರು ಜಿಲ್ಲೆಯ ಎಲ್ಲಾ ಬಾಗದಲ್ಲಿ ನೀಡಿದಂತೆ ನಮ್ಮ ತಾಲೂಕಿಗೂ ಆಹಾರದ ಕಿಟ್‍ನ್ನು ನೀಡಿದ್ದರು. ಇದರ ಜೊತೆಗೆ ಕೆ.ಜಿ.ನಾಯ್ಕ,ಉಪೇಂದ್ರ ಪೈ ಸೇರಿದಂತೆ ಹಲವು ವ್ಯಕ್ತಿಗಳು,ಸಂಸ್ತೆಗಳು ಕೊವಿಡ್ ವಾರಿಯರ್ಸ್‍ ಗಷ್ಟೆ ಅಲ್ಲ ಅವಶ್ಯಕವುಳ್ಳವರಿಗೆ ಆಹಾರದ ಕಿಟ್ ನೀಡಿದ್ದರು ಈಗ ಬಿಜೆಪಿ ಆಶಾಕಾರ್ಯಕರ್ತೆಯರಿಗೆ ಸೀರೆ ವಿತರಿಸುವ ಮೂಲಕ ಅವರ ಸೇವೆಗೆ ಸಣ್ಣಗೌರವವನ್ನು ಸಲ್ಲಿಸುತ್ತಿದೆ ಇದರಿಂದ ಅವರ ಸೇವಾ ಮನೋಭಾವನೆ ಹೆಚ್ಚಾಗುವಂತೆ ಮಾಡುತ್ತದೆ ಎಂದು ಹೇಳಿದರು.

ವೇದಿಕೆಯಲ್ಲಿ ಜಿಪಂ ಸದಸ್ಯ ಎಂ.ಜಿ.ಹೆಗಡೆ ಗೆಜ್ಜೆ,ತಾಪಂಸ್ಥಾಯಿ ಸಮಿತಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ, ಬಿಜೆಪಿ ಮುಖಂಡರಾದ,ಕೃಷ್ಣಮೂರ್ತಿ ಕಡಕೇರಿ,ಮಹಿಳಾ ಮೋರ್ಚಾ ಅಧ್ಯಕ್ಷೆ ಸುಮನಾ ಕಾಮತ್,ಗುರುರಾಜ ಶಾನಭಾಗ,ಮಾರುತಿ ನಾಯ್ಕ ಹೊಸೂರು ಮುಂತಾದವರು ಉಪಸ್ಥಿತರಿದ್ದರು. ಎಸ್.ಕೆ.ಮೇಸ್ತ ಸ್ವಾಗತ ಕೋರಿದರು. ಪ್ರಸನ್ನ ಹೆಗಡೆ ನಿರೂಪಿಸಿದರು.

******
ಸಿದ್ದಾಪುರ ತಾಪಂ ಕೆಡಿಪಿ ಸಭೆ
ಪಟ್ಟಣದ ತಾಪಂ ಸಭಾಭವನದಲ್ಲಿ ಮಂಗಳವಾರ ತಾಪಂ ಅಧ್ಯಕ್ಷ ಸುಧೀರ್ ಗೌಡರ್ ಅಧ್ಯಕ್ಷತೆಯಲ್ಲಿ ಮಾಸಿಕ ಕೆಡಿಪಿ ಸಭೆ ನಡೆಯಿತು.

ಸಭೆಯಲ್ಲಿ ಮಾತನಾಡಿದ ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ, ತಾಲೂಕಿನ ಖಾಸಗಿ ಗೊಬ್ಬರ ಅಂಗಡಿಯವರು ಹಾಗೂ ಕೆಲವು ಸಹಕಾರಿ ಸಂಸ್ಥೆಗಳು ಕೃಷಿಗೆ ಅವಶ್ಯಕವಾಗಿರುವ ಗೊಬ್ಬರವನ್ನು ಚಿಲ್ಲರೆಯಾಗಿ ನೀಡುತ್ತಿಲ್ಲ ಸಗಟು ಖರೀದಿ ಮಾಡಬೇಕು ಎಂದು ರೈತರ ಮೇಲೆ ಒತ್ತಡ ಹಾಕುತ್ತಿದ್ದಾರೆ ಇದರಿಂದ ರೈತರು ಅನವಶ್ಯಕವಾಗಿ ಹೆಚ್ಚಾಗಿ ಗೊಬ್ಬರ ಖರೀದಿ ಮಾಡುವಂತಾಗಿದೆ ಎಂದು ದೂರಿದರು.
ಸದಸ್ಯ ನಾಸೀರ್ ಖಾನ್ ಮಾತನಾಡಿ, ನಮ್ಮ ತಾಲೂಕಿನಲ್ಲಿ ಸಣ್ಣ ರೈತರು ಹೆಚ್ಚಾಗಿದ್ದಾರೆ ಅವರಿಗೆ 10-20 ಕೆ.ಜಿ.ಗೊಬ್ಬರದ ಅವಶ್ಯಕತೆ ಇರುತ್ತದೆ 50ಕೆ.ಜಿ. ಗೊಬ್ಬರ ಒಯ್ದರೆ ಹೆಚ್ಚಿನ ಗೊಬ್ಬರ ಅವರು ಏನು ಮಾಡಬೇಕು ಗೊಬ್ಬರದ ಅಂಗಡಿಯವರು ರೈತರ ಸುಲಿಗೆ ಮಾಡಲು ನಿಂತಿದ್ದಾರೆಯೇ? ಎಂದು ಪ್ರಶ್ನಿಸಿದರು.
ಅಧ್ಯಕ್ಷ ಸುಧೀರ್ ಗೌಡರ್ ಮಾತನಾಡಿ, ಈ ಬಗ್ಗೆ ಹಿಂದೆಯೇ ಠರಾವು ಮಾಡಲಾಗಿತ್ತು ರೈತರ ಸುಲಿಗೆ ಮಾಡುವುದು ಸರಿಯಲ್ಲ ಕೃಷಿ ಅಧಿಕಾರಿಗಳು ಸಂಬಂದಿಸಿದವರಿಗೆ ಸರಿಯಾದ ಸೂಚನೆಯನ್ನು ನೀಡುವುದರ ಜೊತೆಗೆ ರೈತರಿಗೆ ಅವಶ್ಯಕವಾಗಿರುವಷ್ಟು ಗೊಬ್ಬರ ಒಯ್ಯಲು ಅವಕಾಶ ಕಲ್ಪಿಸಿಕೊಡಬೇಕು ಈ ಬಗ್ಗೆ ಸಾಮನ್ಯ ಸಭೆಯಲ್ಲಿ ಇನ್ನೊಮ್ಮೆ ಠರಾವು ಮಾಡಿ ಮುಮದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಕೃಷಿ ಅಧಿಕಾರಿ ಪ್ರಶಾಂತ ಮಾತನಾಡಿ,ತಾಲೂಕಿನಲ್ಲಿ ಒಟ್ಟೂ 8962 ಭತ್ತ ಬೆಳೆಯುವ ಪ್ರದೇಶವಿದ್ದು ಸುಮಾರು 5300 ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಕಾರ್ಯ ಮುಗಿದಿದೆ. ನಮ್ಮ ತಾಲೂಕಿನಲ್ಲಿ ಗೊಬ್ಬರದ ಕೊರತೆ ಇಲ್ಲ 120 ಟನ್ ಯೂರಿಯಾ ಗೊಬ್ಬರದ ದಾಸ್ತಾನು ಇದೆ ಉಳಿದ ಗೊಬ್ಬರಗಳ ದಾಸ್ತಾನೂ ಇದೆ ಬೆಳೆಹಾನಿಯನ್ನು ರೈತರು ಆಪ್ ಮೂಲಕವೂ ಸಲ್ಲಿಸಲು ಅವಕಾಶವಿದೆ ಎಂದು ಹೇಳಿದರು.
ಅರಣ್ಯ ಇಲಾಖೆಗೆ ಸೇರಿದ ಮರಗಳು ಬಹಳಷ್ಟು ಕಡೆಗೆ ರಸ್ತೆಯ ಬದಿಯಲ್ಲಿ ಕಳೆದ ಮೂರು-ನಾಲ್ಕು ವರ್ಷದಿಂದ ಬಿದ್ದಿದೆ ಅರಣ್ಯ ಇಲಾಕೆಯವರು ಇದನ್ನು ಸಾಗಿಸಿ ಮಾರಾಟ ಮಾಡಿದರೆ ಇಲಾಖೆಗೆ ಲಾಬವಾಗುವುದರ ಜೊತೆಗೆ ಜನರ ಓಡಾಟಕ್ಕೂ ಅನುಕೂಲವಾಗುತ್ತದೆ ಎಂದು ಸುಧಿರ್ ಗೌಡರ್ ಹೇಳಿದರು.
ತಾಲೂಕಿನಲ್ಲಿ ಅರಣ್ಯ ಇಲಾಖೆಯವರು ಎಷ್ಟು ಸಸಿಗಳನ್ನು ಬೆಳೆಸಿದ್ದೀರಿ,ಎಷ್ಟು ಆದಾಯ ಗಳಿಸಿದ್ದೀರಿ?ಎಷ್ಟು ಸಸಿಗಳನ್ನು ಮಾರಿದ್ದೀರಿ ಈ ಎಲ್ಲಾ ಮಾಹಿತಿಗಳನ್ನು ಮುಂದಿನ ಸಭೆಯಲ್ಲಿ ನೀಡಬೇಕು ಎಂದು ಸದಸ್ಯ ವಿವೇಕ ಭಟ್ಟ ಆಗ್ರಹಿಸಿದರು.
ತಾಲೂಕಿನಲ್ಲಿ ಒಟ್ಟೂ2630ಮಿಮಿ ಮಳೆಯಾಗಿದ್ದು ವಾಡಿಕೆ ಮಳೆಗಿಂತ ಶೇ9ರಷ್ಟು ಹೆಚ್ಚುಮಳೆಯಾಗಿದೆ,ಉಂಬಳಮನೆ ಹೋಬಳಿಯಲ್ಲಿಶೇ.26,ಕೊಂಡ್ಲಿ ಹೋಬಳಿಯಲ್ಲಿಶೇ.5ರಷ್ಟು ಮಳೆಯ ಕೊರತೆಯಾಗಿದ್ದು ಕೋಡ್ಕಣಿ ಹೋಬಳಿಯಲ್ಲಿಶೇ10 ಹೆಚ್ಚುಮಳೆಯಾಗಿದೆ ಎಂದು ಕೃಷಿ ಅಧಿಕಾರಿ ತಿಳಿಸಿದ್ದಾರೆ
ಮಳೆಯಿಂದಾಗಿ ತಾಲೂಕಿನಲ್ಲಿ 53 ಮನೆಗಳು,ನಾಲ್ಕು ಕೊಟ್ಟಿಗೆಗಳು ಹಾನಿಯಾಗಿವೆ 3 ಮನೆಗಳು ತೀವ್ರ ಹಾನಿಯಾಗಿದೆ ಎಂದು ಉಪತಹಸೀಲ್ದಾರ ಎನ್.ಐ.ಗೌಡ ಮಾಹಿತಿ ನಿಡಿದರು.

About the author

Adyot

Leave a Comment