ಸಿದ್ದಾಪುರದಲ್ಲಿ ಕೊವಿಡ್ ಹೆಚ್ಚಳ ಒಂದೇ ದಿನ 24ಕೇಸ್

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯಲ್ಲಿ ಕೊವಿಡ್ ಹೆಚ್ಚಳವಾಗುತ್ತಿದ್ದು ರವಿವಾರ 111 ಜನರಲ್ಲಿ ಕೊವಿಡ್ ಪಾಸಿಟಿವ್ ಕಾಣಿಸಿಕೊಂಡಿದೆ ಅದರಲ್ಲಿ ಸಿದ್ದಾಪುರ ತಾಲೂಕಿನಲ್ಲಿ 24 ಜನರಲ್ಲಿ ಕಾಣಿಸಿಕೊಂಡಿದೆ.
ಅದರಲ್ಲಿ ಎರಡು ವರ್ಷದ ಮಗುವಿದೆ,ಹೆಸ್ಕಾಂ ಲೈನ್ ಮೇನ್ ಇದ್ದಾರೆ,ಕೊವಿಡ್ ವಾರಿಯರ್ಸ ಆಶಾಕಾರ್ಯಕರ್ತೆಯೂ ಇರುವುದು ಆತಂಕಕ್ಕೆ ಕಾರಣವಾಗಿದೆ.
ತಾಲೂಕಿನ ಹಸರಗೋಡು ಗ್ರಾಮ ಕೊವಿಡ್ ಹಾಟ್ ಸ್ಪಾಟ್ ಎನಿಸಿಕೊಂಡಿದ್ದು ಇಲ್ಲಿಯವರೆಗೆ 23
ಕ್ಕಿಂತ ಹೆಚ್ಚು ಕೊವಿಡ್ ಕೇಸ್ ಗಳು ಕಾಣಿಸಿಕೊಂಡಿದೆ. ಮತ್ತು ಪ್ರತಿದಿನ ಒಂದು-ಎರಡು ಕೇಸ್ ಗಳು ಕಾಣಿಸುತ್ತಿದೆ.ಪರಸ್ಪರ ಸಂಪರ್ಕ ಇಲ್ಲದಿರುವ ದೂರ ದೂರ ಮನೆಗಳಿರುವ ಈ ಗ್ರಾಮದಲ್ಲಿ ಇಷ್ಟು ಪ್ರಮಾಣದ ಕೊವಿಡ್ ಕಾಣಿಸಿಕೊಂಡಿರುವುದು ಯಕ್ಷಪ್ರಶ್ನೆಯಾಗಿದೆ.
ಸಿದ್ದಾಪುರ ತಾಲೂಕಿನಲ್ಲಿ ಒಟ್ಟು 115 ಕೇಸ್ ಗಳಿದ್ದು 52 ಕ್ಕೂ ಹೆಚ್ಚು ಸಕ್ರೀಯ ಕೇಸ್ ಗಳಿವೆ ಹೆಚ್ಚಿನ ಕೊವಿಡ್ ಕೇಸಗಳನ್ನು ಮನೆಯಲ್ಲೇ ಐಸೋಲೇಷನ್ ಮಾಡಲಾಗುತ್ತಿದ್ದು 6
ಜನರನ್ನು ಕೊಂಡ್ಲಿ ಕೊವಿಡ್ ಕೇಂದ್ರದಲ್ಲಿ ಇಡಲಾಗಿದೆ. ಪ್ರತಿದಿನ ನೂರಕ್ಕೂ ಹೆಚ್ಚು ಗಂಟಲು ದ್ರವವನ್ನು ಪರೀಕ್ಷಿಸಲಾಗುತ್ತಿದೆ ಹೀಗಾಗಿ ಕೊವಿಡ್ ಪ್ರಕರಣ ಇನ್ನಷ್ಟು ಹೆಚ್ಚಾಗುವ ಎಲ್ಲಾ ಸಾಧ್ಯತೆ ಇದೆ.

About the author

Adyot

Leave a Comment