ಆದ್ಯೋತ್ ಸುದ್ದಿನಿಧಿ:
ಸರಕಾರಿ ಆಸ್ಪತ್ರೆಯ ಅವ್ಯವಸ್ಥೆ ಮತ್ತು ಖಾಸಗಿ ಆಸ್ಪತ್ರೆಯ ಸುಲಿಗೆಯ ವಿರುದ್ಧ ಮನವಿ
ತಾಲೂಕು ಸರಕಾರಿ ಆಸ್ಪತ್ರೆಯ ಅವ್ಯವಸ್ಥೆ ಹಾಗೂ ಪಟ್ಟಣದ ಖಾಸಗಿ ಆಸ್ಪತ್ರೆಯ ಸುಲಿಗೆಯನ್ನು ಖಂಡಿಸಿ ಶನಿವಾರ ಕರ್ನಾಟಕ ರಣಧೀರಪಡೆಯ ಸದಸ್ಯರು ಜಿಲ್ಲಾಸಂಘಟನಾ ಕಾರ್ಯದರ್ಶಿ ಹೇಮಂತನಾಯ್ಕ ನೇತೃತ್ವದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೆರಿಯವರಿಗೆ ಮನವಿಯನ್ನು ಸಲ್ಲಿಸಿದರು.
ತಾಲೂಕು ಸರಕಾರಿ ಆಸ್ಪತ್ರೆಯ ಆಡಳಿತ ಮಂಡಳಿ ಆಸ್ಪತ್ರೆಯ ಹೊರರೋಗಿಯ ಶುಲ್ಕವನ್ನು 15ರೂ. ನಿಗದಿಪಡಿಸಿದ್ದು ಇದೇ ವಿಧಾನಸಭಾ ಕ್ಷೇತ್ರದ ಶಿರಸಿ ಸರಕಾರಿ ಆಸ್ಪತ್ರೆಯಲ್ಲಿ 5ರೂ.ಶುಲ್ಕವಿದೆ. ಅಲ್ಲದೆ ಸರಕಾರಿ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಆಗಲಿ,ಸ್ಕ್ಯಾನರ್ ಆಗಲಿ ಇಲ್ಲ ಅಲ್ಲದೆ ಇಲ್ಲಿಯ ಸಿಬ್ಬಂದಿಗಳು ಯಾವುದರ ಬಗ್ಗೆಯೂ ಸರಿಯಾಗಿ ಮಾಹಿತಿ ನೀಡುವುದಿಲ್ಲ.ಇದರಿಂದ ಪಟ್ಟಣದ ಖಾಸಗಿ ಆಸ್ಪತ್ರೆಯೊಂದಕ್ಕೆ ಹೋದರೆ ಅಲ್ಲಿ ಜನರನ್ನು ಸುಲಿಗೆ ಮಾಡಲಾಗುತ್ತಿದೆ. ಸಾದಾರಣ ಒಂದು ಹೆರಿಗೆಗೆ 35-40ಸಾವಿರರೂ. ಬಿಲ್ ಮಾಡಲಾಗುತ್ತಿದೆ.ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ.ಕೂಡಲೇ ಸರಕಾರಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆಗೆ ಅವಕಾಶ ಕಲ್ಪಿಸಿ ಖಾಸಗಿ ಆಸ್ಪತ್ರೆಯ ಸುಲಿಗೆಯನ್ನು ನಿಲ್ಲಿಸಬೇಕು ಇಲ್ಲವಾದಲ್ಲಿ ಕರ್ನಾಟಕ ರಣಧೀರಪಡೆ ಉಗ್ರಹೋರಾಟ ನಡೆಸಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ರಣಧೀರ ಪಡೆಯ ಸದಸ್ಯರಾದ ರವಿಕುಮಾರ ನಾಯ್ಕ,ರಾಜೇಶ ನಾಯ್ಕ,ಮಹೇಂದ್ರ ಗೌಡ ಲಂಬಾಪುರ,ಮಹೇಶ ನಾಯ್ಕ ಶಿರಳಗಿ,ಲೋಹಿತ ಕತ್ತಿ ಕೋಲಸಿರ್ಸಿ,ಅನಿಲ ನಾಯ್ಕಕೊಠಾರಿ,ಕೋಲಸಿರ್ಸಿ,ಗಿರೀಶ ನಾಯ್ಕ ಶಿರಳಗಿ ಉಪಸ್ತಿತರಿದ್ದರು.
👍