ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದ 56 ವರ್ಷದ ವ್ಯಕ್ತಿಯೊಬ್ಬ ಬುಧವಾರ ರಾತ್ರಿ ಕೊವಿಡ್ ಗೆ ಬಲಿಯಾಗುವುದರೊಂದಿಗೆ ತಾಲೂಕಿನಲ್ಲಿ ಕೊವಿಡ್ ಸಾವು ಪ್ರಾರಂಭವಾದಂತಿದೆ.
ಕಳೆದ ಒಂದುವಾರದಿಂದ ಜ್ವರದಿಂದ ಬಳಲುತ್ತಿದ್ದ ವ್ಯಕ್ತಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಆದರೆ ಕಡಮೆಯಾಗದ ಕಾರಣ ಸರಕಾರಿ ಆಸ್ಪತ್ರೆಗೆ ತೆರಳಿದ್ದ ಅಲ್ಲಿ ಕೊವಿಡ್ ಪರೀಕ್ಷೆ ಮಾಡಲಾಗಿ ಕೊವಿಡ್ ಇರುವುದು ದೃಢಪಟ್ಟಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರದ ಕೊವಿಡ್ ಕೇಂದ್ರಕ್ಕೆ ಕಳುಹಿಸಲಾಗಿತ್ತು.ಆದರೆ ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ.
ಕೊವಿಡ್ ಪ್ರಾರಂಭವಾದ ಮೊದಲಲ್ಲಿ ತಾಲೂಕಿನಲ್ಲಿ ಕೊವಿಡ್ ಸಂಖ್ಯೆ ಕಡಿಮೆ ಇತ್ತು ಯಾವಾಗ ಲಾಕ್ ಡೌನ್ ತೆರವುಗೊಳಿಸಲಾಯಿತೋ ಕೊವಿಡ್ ಜ್ವರದಂತೆ ರೋಗಿಗಳ ಸಂಖ್ಯೆ ಹೆಚ್ಚಾಗತೊಡಗಿತು.
ಇಲ್ಲಿಯವರೆಗೆ ತಾಲೂಕಿನಲ್ಲಿ ಒಟ್ಟೂ 241ಕೊವಿಡ್ ಪ್ರಕರಣವಿದೆ.ಸುಮಾರು 88 ಪ್ರಕರಣಗಳು ಸಕ್ರೀಯವಾಗಿದೆ.ಕಾರವಾರ ಕೊವಿಡ್ ಕೇಂದ್ರದಲ್ಲಿ 2 ವ್ಯಕ್ತಿಗಳಿದ್ದರೆ.ತಾಲೂಕು ಆಸ್ಪತ್ರೆಯಲ್ಲಿ 4 ವ್ಯಕ್ತಿಗಳಿದ್ದಾರೆ.
14 ಜನರು ಪಟ್ಟಣದ ಕೊಂಡ್ಲಿ ಕೊವಿಡ್ ಕೇಂದ್ರದಲಿದ್ದರೆ,ಉಳಿದ 68 ಕೊವಿಡ್ ಪೀಡಿತರು ಹೊಂ ಕ್ವಾರೆಂಟನ್ ಲ್ಲಿದ್ದಾರೆ.
ಕೊವಿಡ್ ಪ್ರಾರಂಭಿಕ ಹಂತದಲ್ಲಿದ್ದರೆ ಚಿಕಿತ್ಸೆಯಿಂದ ಗುಣಪಡಿಸಬಹುದು,ಯಾವುದೇ ಲಕ್ಷಣ ಇಲ್ಲದಿದ್ದರೂ ಕೊವಿಡ್ ಕಂಡುಬರುತ್ತಿದೆ ಗಂಟಲು,ಮೂಗು ದ್ರವ ಪರೀಕ್ಷೆಯಿಂದ ಇದನ್ನು ಕಂಡು ಹಿಡಿಯಬಹುದು.
ಆರೋಗ್ಯ ಇಲಾಖೆ,ಸ್ಥಳೀಯ ಆಡಳಿತ ಗಂಟಲು ದ್ರವ ಪರೀಕ್ಷೆಯನ್ನು ಮಾಡುತ್ತಿದ್ದಾರೆ.ಆದರೆ ಜನರು ಪರೀಕ್ಷೆ ಮಾಡಿಸಿಕೊಳ್ಳಲು ಹಿಂಜರಿಯುತ್ತಿರುವುದು ಕಂಡು ಬರುತ್ತಿದೆ.ಇದರಿಂದ ರೋಗ ಪತ್ತೆಯಾಗುವುದು ತಡವಾಗುತ್ತದೆ.ಇದರಿಂದ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇರುತ್ತದೆ.ಪ್ರಾಣಕಳೆದುಕೊಳ್ಳುವುದಕ್ಕಿಂತ 14 ದಿನ ಕ್ವಾರೆಂಟನಲ್ಲಿರುವುದು ಒಳ್ಳೆಯದಲ್ಲವೇ? ಆದ್ದರಿಂದ
ಸಾರ್ವಜನಿಕರು ಕೊವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಆದ್ಯೋತ್ ನ್ಯೂಸ್ ಮನವಿ ಮಾಡುತ್ತಿದೆ.
🤔😑😶