ಆದ್ಯೋತ್ ಸುದ್ದಿನಿಧಿ:
ಅಗಸ್ಟ್ ತಿಂಗಳಲ್ಲಿ ಸುರಿದ ಭಾರಿ ಮಳೆ ಹಾಗೂ ನೆರೆಯ ಮಹಾರಾಷ್ಟ್ರದ ಮಳೆಯಿಂದ ನಲುಗಿರುವ ರಾಜ್ಯದ 23 ಜಿಲ್ಲೆಗಳ 130 ತಾಲೂಕುಗಳನ್ನು ಅತಿವೃಷ್ಟಿ/ ಪ್ರವಾಹಪೀಡಿತವೆಂದು ಘೋಷಿಸಿ ರಾಜ್ಯಸರಕಾರ ಆದೇಶ ಹೊರಡಿಸಿದೆ.
ಅಗಸ್ಟ್ ತಿಂಗಳಲ್ಲಿ ಮಹಾರಾಷ್ಟ್ರದಲ್ಲಾದ ಭಾರಿ ಮಳೆಯಿಂದ ಕೃಷ್ಣಾನದಿ ಕಣಿವೆ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು ಅದೇ ಸಮಯದಲ್ಲಿ ಮಲೆನಾಡು ಹಾಗೂ ಕರಾವಳಿ ಪ್ರದೇಶದಲ್ಲು ಭಾರಿಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾದ ಪರಿಣಾಮ ಅಪಾರ ಪ್ರಮಾಣದ ಜೀವಹಾನಿ,ಮನೆಹಾನಿ,ಬೆಳೆಹಾನಿ ಹಾಗೂ ಸಾರ್ವಜನಿಕ ಮೂಲಭೂತ ಸೌಕರ್ಯಗಳ ಹಾನಿಯಾಗಿರುತ್ತದೆ.
ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ಪ್ರಸಕ್ತಸಾಲಿನ ಮುಂಗಾರು ಋತುವಿನಲ್ಲಿ 23ಜಿಲ್ಲೆಗಳ 130 ತಾಲೂಕುಗಳನ್ನು ಅತಿವೃಷ್ಟಿಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದೆ ಎಂದು ವರದಿ ನೀಡಿದೆ.
SDRF/NDRF ಮಾರ್ಗಸೂಚಿ ಪ್ರಕಾರ ಪರಿಹಾರ ಕಾರ್ಯಗಳಿಗೆ ಸರಕಾರದಿಂದ ಹೊರಡಿಸಲಾದ ಸರಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಿ ಜಿಲ್ಲಾಡಳಿತವು ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಸರಕಾರ ಆದೇಶಿಸಿದೆ.
order copy