ಶಿರಸಿ ಜಿಲ್ಲಾ ಹೋರಾಟಕ್ಕೆ ಪತ್ರಚಳುವಳಿ ಪ್ರಾರಂಭ

ಆದ್ಯೋತ್ ಸುದ್ದಿನಿಧಿ:
ಜನಪ್ರತಿನಿಧಿಗಳ ಖುರ್ಚಿ ಅಲುಗಾಡಿದರೆ ಜನರ ಬೇಡಿಕೆ ಈಡೇರುತ್ತದೆ
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಸೋಮವಾರ ಶಿರಸಿ ಜಿಲ್ಲಾ ಹೋರಾಟಸಮಿತಿಯ ಸಿದ್ದಾಪುರ ಘಟಕದಿಂದ ಪತ್ರಚಳುವಳಿ ಪ್ರಾರಂಭಿಸಲಾಯಿತು.

ಪತ್ರಬಿಡುಗಡೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಾಮಾಜಿಕ ಕಾರ್ಯಕರ್ತ ಆರ್.ಜಿ.ಪೈ ಮಂಜೈನ್ ಮಾತನಾಡಿ,ಯಾವುದೇ ಹೋರಾಟವಾಗಲಿ ಸಾಂಕೇತಿಕವಾಗಿ ಮಾಡಿದರೆ ಅಂತಹ ಪರಿಣಾಮ ಬೀರುವುದಿಲ್ಲ
ಜನಾಂದೋಲನ ರೂಪದಲ್ಲಿ ಆದರೆ ಜನಪ್ರತಿನಿಧಿಗಳ ಖುರ್ಚಿ ಅಲುಗಾಡಲು ಪ್ರಾರಂಭವಾದರೆ ನಮ್ಮ ಬೇಡಿಕೆಗಳು ಈಡೇರುತ್ತದೆ.ಕಳೆದ 50 ವರ್ಷದಿಂದ ಶಿರಸಿ ಜಿಲ್ಲೆಗಾಗಿ ಹೋರಾಟ ನಡೆಯುತ್ತಿದೆ ಆದರೆ ಇದು ಸರಕಾರದ ಗಮನ ಸೆಳೆಯಲು ಸಾಧ್ಯವಾಗಿಲ್ಲ ಆದರೆ ಈಗ ಪ್ರಾರಂಭವಾಗಿರುವ ಹೋರಾಟ ಜನಾಂದೋಲನ ರೂಪತಾಳಬೇಕು ನಮ್ಮ ಬೇಡಿಕೆ ಈಡೇರದಿದ್ದರೆ ನಿಮ್ಮ ಖುರ್ಚಿ ಅಲ್ಲಾಡುತ್ತದೆ ಎಂಬ ಸ್ಪಷ್ಟ ಸಂದೇಶ ನಮ್ಮ ಜನಪ್ರತಿನಿಧಿಗಳಿಗೆ ಮುಟ್ಟಬೇಕು ಆಗ ನಮ್ಮ ಬೇಡಿಕೆ ಈಡೇರಲು ಸಾಧ್ಯ ಎಂದು ಹೇಳಿದರು.

ಶಿರಸಿಜಿಲ್ಲಾಹೋರಾಟಸಮಿತಿಯ ಅಧ್ಯಕ್ಷ ಉಪೇಂದ್ರ ಪೈ ಮಾತನಾಡಿ,ಘಟ್ಟದ ಮೇಲಿನ 7 ತಾಲೂಕನ್ನು ಸೇರಿಸಿ ಶಿರಸಿ ಜಿಲ್ಲೆ ಮಾಡಬೇಕು ಹಾಗೂ ಬನವಾಸಿಯನ್ನು 8ನೇ ತಾಲೂಕನ್ನಾಗಿ ಮಾಡಬೇಕು ಎಂಬ ನಮ್ಮ ಬೇಡಿಕೆಗಾಗಿ ಹೋರಾಟ ಪ್ರಾರಂಭಿಸಲಾಗಿದೆ.ನಮ್ಮ ಬೇಡಿಕೆಯನ್ನು ಈಡೇರಿಸಿಕೊಳ್ಳಲು ನಾವು ಹಂತ ಹಂತವಾಗಿ ಹೋರಾಟವನ್ನು ರೂಪಿಸುತ್ತಿದ್ದೇವೆ.ಅದರ ಒಂದು ಭಾಗ ಪತ್ರಚಳುವಳಿ. ಶಿರಸಿಜಿಲ್ಲೆ ಆಗುವುದರಿಂದ ಅಭಿವೃದ್ಧಿ ಆಗುವುದರ ಬಗ್ಗೆ,ಹಣ,ಸಮಯ ಉಳಿತಾಯವಾಗುವುದರ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಈ ಹೋರಾಟ ಜನಾಂದೋಲನ ರೂಪ ಪಡೆಯುವಂತೆ ಮಾಡಬೇಕು ಎಂದು ಹೇಳಿದರು.

ಶಿರಸಿಜಿಲ್ಲಾಹೋರಾಟ ಸಮಿತಿ ಸಿದ್ದಾಪುರ ಘಟಕದ ಅಧ್ಯಕ್ಷ ಸಿ.ಎಸ್.ಗೌಡರ್ ಮಾತನಾಡಿ,ಈಗ ನಾವು ಜಿಲ್ಲಾಕೇಂದ್ರ ಕಾರವಾರಕ್ಕೆ ಹೋಗಲು ಒಂದು ದಿನ ಬೇಕಾಗುತ್ತದೆ ಇದರಿಂದ ನಮ್ಮ ಹಣ,ಸಮಯ ಎಲ್ಲಾ ಹಾಳಾಗುತ್ತಿದೆ ಅಲ್ಲದೆ ಭೌಗೋಳಿಕವಾಗಿ ವಿಸ್ತಾರವಾಗಿರುವ ಜಿಲ್ಲೆ ಅಭಿವೃದ್ಧಿ ಆಗಲು ಸಾಧ್ಯವಿಲ್ಲ ಆದ್ದರಿಂದ ಆಡಳಿತಾತ್ಮಕ ಅನುಕೂಲಕ್ಕಾಗಿ,ಜನಾನುಕೂಲಕ್ಕಾಗಿ ಶಿರಸಿಜಿಲ್ಲೆ ಆಗಲೇಬೇಕು ಈ ಬಗ್ಗೆ ಎಲ್ಲಾ ರೀತಿಯ ಹೋರಾಟವನ್ನು ಮಾಡಲು ಜನರು ಸಿದ್ದರಾಗಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಸಾಹಿತಿ ಸುಬ್ರಾಯ ಮತ್ತಿಹಳ್ಳಿ,ಶಿರಸಿಜಿಲ್ಲಾ ಹೋರಾಟ ಸಮಿತಿಯ ಸಂಚಾಲಕ ಮಂಜುನಾಥ ಭಟ್ಟ,ಕಾರ್ಯದರ್ಶಿ ಮಂಜು ಮೊಗೇರ ಉಪಸ್ಥಿತರಿದ್ದರು.
ಜಿ.ಜಿ.ಹೆಗಡೆ ಬಾಳಗೋಡ ನಿರೂಪಣೆ ಮಾಡಿದರು.ಪಿ.ಬಿ.ಹೊಸೂರು ಸ್ವಾಗತಿಸಿದರು.
************************************

***********************************

**********************************

********”*************************

About the author

Adyot

Leave a Comment